This is the title of the web page
This is the title of the web page

Please assign a menu to the primary menu location under menu

Local News

ಕಾನೂನು ವಿಶ್ವವಿದ್ಯಾಲಯಕ್ಕಾಗಿ ಬಾರ ಅಸೋಷಿಯೇಷನ್ ಪ್ರತಿಭಟನೆ


ಬೆಳಗಾವಿ: ಜಿಲ್ಲೆಯಲ್ಲಿ  ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಬಾರ್ ಅಸೋಸಿಯೇಷನ್‍ನ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಂಮತ್ರಿಗಳಿಗೆ ಮನವಿ ಸಲ್ಲಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡಿಸಿದ ಅವರು ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಕಾನೂನು ವಿಶ್ವವಿದ್ಯಾಲಯ ಇಲ್ಲದೇ ಇರುವುದರಿಂದ ಕಾನೂನು ಅದ್ಯಯನಕ್ಕೆ ಬೇರೆ ಕಡೆಗೆ ಹೋಗುವ ಪರಿಸ್ಥಿತಿ ಇದ್ದು ಬೆಳಗಾವಿಯಲ್ಲಿಯೂ ಒಂದು ವಿಶ್ವವಿದ್ಯಾಲಯ ಬೇಕು ಎಂದು  ಬೆಳಗಾವಿ ಬಾರ್ ಆಸೋಸಿಯೇಷನ್‍ನ ಅಧ್ಯಕ್ಷ ಪ್ರಭು ಯತ್ನಟ್ಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡಿಸಿದರು.

ಬೆಳಗಾವಿಯಲ್ಲಿ ಸುವರ್ಣಸೌಧವನ್ನು ನಿರ್ಮಿಸಿ, ಪ್ರತಿವರ್ಷ ಅಧಿವೇಶನಗಳನ್ನು ನಡೆಸಲಾಗುತ್ತಿದೆ. ನೂರಾರು ವರ್ಷ ಹಳೆಯದಾದ ಕಾನೂನು ಮಹಾವಿದ್ಯಾಲಯಗಳಿರುವ ಬೆಳಗಾವಿಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಯಲವನ್ನು ಕೂಡ ಬೆಳಗಾವಿಯಲ್ಲೇ ಸ್ಥಾಪಿಸಬೇಕು ಇದರಿಂದ ಇಲ್ಲಿನ ಜನರಿಗೆ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತಿದಿನ ಅಲೆದಾಡುವ ಪ್ರಸಂಗ ತಪ್ಪುತ್ತದೆ ಎಂದು ಮನವಿಯ ಮೂಲಕ ಆಗ್ರಹಿಸಿದರು.


Gadi Kannadiga

Leave a Reply