ಚಿಕ್ಕೋಡಿ: ಬೈಕ್ ಸವಾರನ ಮೇಲೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ರಸ್ತೆ ಬಳಿ ನಡೆದಿದೆ.
ಚಿಂತಾಮಣ (26) ಕೊಲೆಯಾದ ದುರ್ದೈವಿ. ಐನಾಪೂರದಿಂದ ಕಾತ್ರಾಳ ಕಡೆಗೆ ತೆರಳುವಾಗ ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದ್ದೆ. ಇನ್ನು ಮೃತ ಚಿಂತಾಮಣಿ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಎನ್ನಲಾಗಿದೆ.
ಮೃತ ಚಿಂತಾಮಣಿಯನ್ನು ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ನಿವಾಸಿಯಾಗಿದ್ದು, ಎರಡು ತಿಂಗಳ ಹಿಂದೆ ಐನಾಪೂರ ಗ್ರಾಮದಲ್ಲಿ ಮೆಡಿಕಲ್ ಶಾಪ್ ಹಾಕಿದ್ದ. ಕೆಲಸ ಮುಗಿಸಿ ವಾಪಸ್ ಆಗ್ತಿದ್ದ ವೇಳೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.