ಬೆಳಗಾವಿ: ಲಿಂಗಾಯಿತ ಕ್ಷಮಾಭಿವೃದ್ಧಿ ಸಂಘದಿಂದ ಇದೇ ಶುಕ್ರವಾರ ದಿನಾಂಕ 21 ರಂದು ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ.
ಬೆಳಗಾವಿ ಕುವೆಂಪು ನಗರದ ಕೆಎಲ್ಇ ಸಂಸ್ಥೆಯ ಇಂಟರ್ನ್ಯಾಷನಲ್ ಸ್ಕೂಲ್ ಹತ್ತಿರದ ಬಸವೇಶ್ವರನಗರ ಉದ್ಯಾನವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಂದು ಬೆಳಗಿನ ಜಾವ ಏಳೂವರೆ ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಶ್ರೀಮತಿ ನಿರ್ಮಲಾ ಮತ್ತು ಶ್ರೀ ಸೋಮಶೇಖರ್ ಸುಳೇಗಾವಿ ಇವರು ನೆರವೇರಿಸಲಿದ್ದಾರೆ.
ಸಂಜೆ ಐದು ಗಂಟೆಗೆ ನಡೆಯಲಿರುವ ಮುಖ್ಯ ಕಾರ್ಯಕ್ರಮದ ಸಾನಿಧ್ಯವನ್ನು ತುಮಕೂರು ಜಿಲ್ಲೆ ಕೊರಟಗೆರೆಯ ಶ್ರೀ. ಬಸವಕಿರಣ ಸ್ವಾಮಿಗಳು ವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ಜಿ. ಸಿದ್ನಾಳ ವಹಿಸಲಿದ್ದು ಶ್ರೀಕಾಂತ್ ಶಾನವಾಡ ಅವರು “ಧರ್ಮಗುರು ಬಸವಣ್ಣನವರು ಹಾಗೂ ಶರಣ ಸಂಸ್ಕೃತಿ” ಕುರಿತು ಉಪನ್ಯಾಸ ನೀಡಲಿದ್ದಾರೆ, ಹಾವೇರಿ ವಿಶ್ವವಿದ್ಯಾಲಯದ ಕುಲ ಸಚಿವೆ ಡಾ.ವಿಜಯಲಕ್ಷ್ಮಿ ಪುಟ್ಟಿ ,ಶ್ರೀಮತಿ.ಗಿರಿಜಾ ಹಟ್ಟಿ ಹೊಳಿ, ಶ್ರೀ. ಅಶೋಕ್ ಚಂದರಗಿ, ಶ್ರೀ. ಅಶೋಕ್ ಮಳಗಲಿ ಹಾಗೂ ಶ್ರೀ ವೈ.ಎನ್. ಶಿಂತ್ರಿ ಅವರುಗಳನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಗುತ್ತಿದೆ.