WhatsApp Group
Join Now
ಬೆಳಗಾವಿ17.ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.17.08.2025ರಂದು . ವಾರದ ಪ್ರಾರ್ಥನೆಯಲ್ಲಿ ಬಸವಣ್ಣನವರ ವಚನಗಳಲ್ಲಿ ಸ್ವ ವಿಮರ್ಶೆ ಕುರಿತು ಮಾತನಾಡುತ್ತಾ ವೈಚಾರಿಕ ವಿಚಾರಧಾರೆಯ ಸುಂದರ ಸಮ ಸಮಾಜದ ಕನಸು ಕಟ್ಟಿಕೊಂಡು ಅದನ್ನು ನನಸಾಗಲು ವ್ಯಕ್ತಿಯಲ್ಲಿ ಅಂತರಂಗ ಶೋಧ ನಡೆಸಬೇಕು ನಮ್ಮ ನಮ್ಮಲ್ಲಿ ವಿಮರ್ಶೆ ಮಾಡಿಕೊಂಡಾಗ ಉತ್ತಮ ನಾಗರಿಕರಾಗಲು ನಾವು ಸಾಧ್ಯವಾಗುತ್ತದೆ ಎಂಬುದನ್ನು ಅರಿತು ಎಲ್ಲ ಶರಣರು ಅಹಂಕಾರ ನಿರಶನ ದೇಹ ಮತ್ತು ಮನಸ್ಸುಗಳ ವಿಷಯಗಳನ್ನು ವಚನಗಳ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ ಅಹಂ ಅನ್ನು ಅಳಿಸಿಹಾಕಿ ಅನುಭಾವದ ಸಾಹಿತ್ಯ ಮೂಲಕ ಮನಕುಲವನ್ನೇ ಗೆದ್ದವರು ಅವರ ನಡೆ-ನುಡಿ ಆಚಾರ ವಿಚಾರಗಳು ಈ ಜಗತ್ತಿಗೆ ಮಹಾ ಬೆಳಕಾಗಿದೆ ಎಂದು ತಿಳಿಸಿದರು. ಆನಂದ ಕರಕಿ ಮತ್ತು ಕುಮಾರ ಪಾಟೀಲ ರವರು ಬಸವ ಭಾವಗೀತೆಗಳನ್ನು ಹಾಡಿದರು ಇದೇ ಸಂದರ್ಭದಲ್ಲಿ ಸತೀಶ ಶುಗರ್ಸ್ ನೀಡುವ ಅತಿ ಹೆಚ್ಚು ಕಬ್ಬು ಉತ್ಪಾದನೆ ಬೆಳೆಗೆ ಉತ್ತಮ ಕೃಷಿ ಪ್ರಶಸ್ತಿ ಪಡೆದ ಶಂಕರ ಗುಡಸ ರವರನ್ನು ಸನ್ಮಾನಿಸಲಾಯಿತು ಅವರು ಮಾತನಾಡುತ್ತಾ ಅಂಗದ ಮೇಲೆ ಲಿಂಗ ಇರುವಾಗ ನಮಗೆ ಯಾವುದರ ಭಯ ಇರುವುದಿಲ್ಲ ನಾವು ನಿರ್ಭಯವಾಗಿ ಬದುಕನ್ನು ಕಟ್ಟಿಕೊಂಡು ಬಾಳಬೇಕು ಎಂದು ತಿಳಿಸಿದರು
ಮಹಾದೇವಿ ಅರಳಿ ಸಾಮೂಹಿಕ ಫ್ರಾಥ೯ನೆ ನಡಿಸಿಕೊಟ್ಟರು.ಆನಂದ ಕರಕಿ, ಶಿವಕುಮಾರ ಪಾಟೀಲ,
ವಿ. ಕೆ. ಪಾಟೀಲ,ಬಸವರಾಜ ಬಿಜ್ಜರಗಿ,ಮಹಾದೇವ ಕೆ೦ಪಿಗೌಡ್ರ,ಸುವಣಾ೯ ಗುಡಸ,ಪ್ರೀತಿ ಮಠದ,ಸುನಿಲ ಸಾಣಿಕೊಪ್ಪ ಶರಣಶರಣೆಯರು ವಚನ ವಿಶ್ಲೇಸಿದರು.ಶಶಿಭೂಷಣ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಸದಾಶಿವ ದೇವರಮನಿ,ಮ೦ಗಳಾ ಕಾಗತಿಕರ,ಜೋತಿ ಬದಾಮಿ,ನ೦ದಾ ಬಗಲಿ,ಸುಜಾತಾ ಮತ್ತಿಕಟ್ಟಿ,ವಿದ್ಯಾ ಕರಕಿ,ಮಹದೇವಿ ಘಾಟೆ,ಬಸವರಾಜ ಕರಡಿಮಠ, ಫ.ಬಿ.ಕರಿಕಟ್ಟಿ,ಬಸವರಾಜ ಮತ್ತಿಕಟ್ಟಿ,ಶೇಖರ ವಾಲಿಇಟಗಿ,ಶೆ೦ಕರಣ್ಣಾ ಮೆಣಸಗಿ,
ಶರಣ ಶರಣೆಯರು ಉಪಸ್ಥಿತರಿದ್ದರು.
ಸುನಂದಾ ಮಹದೇವ ಕೆಂಪಿಗೌಡ್ರ ದಾಸೋಹ ಸೇವೆಗೈದರು.ಸುರೇಶ ನರಗುಂದ ಸ್ವಾಗತಿಸಿ ವಂದಿಸಿದರು.ಸಂಗಮೇಶ ಅರಳಿ ನಿರೂಪಿಸಿದರು.ವಚನ ಮಂಗಳದೊಂದಿಗೆ ಮುಕ್ತಾಯ ಗೂಂಡಿತು.