This is the title of the web page
This is the title of the web page

Please assign a menu to the primary menu location under menu

Local News

ಬಸವಣ್ಣನವರು ಲಿಂಗಬೇಧವನ್ನು ತೊಡೆದು ಹಾಕಿದ್ದರು- ಡಾ. ನಾಗರತ್ನಾ


ಬೆಳಗಾವಿ ೨೬ – ಪಾಶ್ಚಿಮಾತ್ಯರಿಗಿಂತಲೂ ಮೊದಲೆ ಮಹಿಳೆಯರಿಗೆ ಹನ್ನೆರಡನೆಯ ಶತಮಾನದಲ್ಲಿ ಪುರುಷರಗಿರುವಷ್ಟೇ ಸರಿ ಸಮಾನವಾದ ಸ್ಥಾನ ಮಾನ ನೀಡಿ ಲಿಂಗ ಭೇದವನ್ನು ತೊಡೆದು ಹಾಕಿದ್ದರು ಎಂದು ಉಪನ್ಯಾಸಕಿ ಡಾ. ನಾಗರತ್ನಾ ಪರಂಡೆ ಇಂದಿಲ್ಲಿ ಹೇಳಿದರು.
ಇದೇ ದಿ. ೨೨ ರಂದು ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವಸೇನೆ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿದ ಮಾಸಿಕ ಅನುಭಾವ ಸತ್ಸಂಗದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ಸಹ ಪ್ರಾದ್ಯಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಾಗರತ್ನಾ ಅವರು ಮೇಲಿನಂತೆ ಅಭಿಪ್ರಾಯಪಟ್ಟರು.
ಮುಂದೆ ಮಾತನಾಡುತ್ತ ಅವರು ಸಂಸಾರಿಯಾಗಿ ಇದ್ದುಕೊಂಡು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂದು ಹೇಳಿದ ಬಸವಣ್ಣನವರು ತಮ್ಮ ಪತ್ನಿ ನೀಲಾಂಬಿಕೆ ಅವರಿಗೆ ಸ್ವಾತಂತ್ರö್ಯವನ್ನು ನೀಡಿದ್ದರು. ಅವರಿಗೆ ವಿಚಾರ ಪತ್ನಿ ಅಂತಾ ಕರೆಯುತ್ತಿದ್ದರು. ಅನೇಕ ಶರಣರ ವಿಚಾರ ಪತ್ನಿಯರು ವಚನಗಳ ರಚಿಸಿ, ಕಾಯಕ ದಾಸೋಹದ ಮೂಲಕ ನೆಮ್ಮದಿಯ ಬದುಕು ಸಾಗಿಸಿದರು. ವಚನ ಸಾಹಿತ್ಯಕ್ಕೆ ಅನೇಕ ಮೌಲಿಕ ವಚನಗಳ ರಚಿಸಿ ವಚನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು ಎಂದು ಹೇಳಿದರು
ಸಾನಿದ್ಯ ವಹಿಸಿದ್ದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿಮಠ, ನಾಗನೂರ ಬೆಳಗಾವಿ ಅವರು, ಇಂದಿನ ಯುವ ಜನಾಂಗ ನಿಜ ಧರ್ಮಾಚರಣೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.
ಬಸವರಾಜ ರೊಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯ ಮೇಲೆ ರಾಷ್ಟಿö್ರÃಯ ಬಸವಸೇನೆಯ ಅದ್ಯಕ್ಷ ಶಂಕರ ಗುಡಸ, ಪ್ರಸಾದ ದಾಸೋಹಿಗಳಾದ ಅನಿತಾ ಮತ್ತು ಬಸವರಾಜ ಚಟ್ಟರ ದಂಪತಿ ಅವರು ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಪ್ರೊ. ವಿಜಯಲಕ್ಷ್ಮೀ ಪುಟ್ಟಿ ಸ್ವಾಗತಿಸಿ ಪರಿಚಯಿಸಿದರು. ಎಸ್ ಜಿ ಸಿದ್ನಾಳ ವಂದಿಸಿದರು. ಅಶೋಕ ಮಳಗಲಿ ಹಾಗೂ ಚಂದ್ರಪ್ಪ ಬೂದಿಹಾಳ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮೋಹನಗೌಡ ಪಾಟೀಲ ಡಾ. ಎಮ್. ಬಿ. ಪಾಟೀಲ, ಮಹಾಂತೇಶ ತೋರಣಗಟ್ಟಿ, ರಾಜು ಪದ್ಮನ್ನವರ, ಬಸವರಾಜ ಸುಲ್ತಾನಪೂರ, ಎಮ್ ಎ ಕೋರಿಶೆಟ್ಟಿ, ಈರಣ್ಣ ಚಿನಗುಡಿ, ಮತ್ತಿಕಟ್ಟಿ ದಂಪತಿ, ಬಶೆಟ್ಟಿ ದಂಪತಿ, ಸುರೇಶ ನರಗುಂದ, ಡಾ. ಅಡಿವೆಪ್ಪ ಇಟಗಿ, ಮಲ್ಲಿಕಾರ್ಜುನ ಬಾಳಿ, ಸುವರ್ಣಾ ಗುಡಸ, ಜಯಕ್ಕ ಚವಲಗಿ, ಅನ್ನಪೂರ್ಣಾ ಮಳಗಲಿ, ಶ್ರೀಮತಿ ಬಗಲಿ, ವನಹಳ್ಳಿ, ರತ್ನಕ್ಕ ಬೆಣಚಮರ್ಡಿ, ಕೆಂಪಣ್ಣ ರಾಮಾಪೂರಿ, ಬಸವಾಭಿಮಾನಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply