ಶರಣ ಸಂಕುಲಕ್ಕೆ  ಅಭಿವ್ಯಕ್ತಿ  ಸ್ವಾತಂತ್ರ್ಯ ನೀಡಿದ ಬಸವಣ್ಣ ; ವಸಂತಕ್ಕ ಗಡಕರಿ

Murugesh Shivapuji
WhatsApp Group Join Now
ಬೆಳಗಾವಿ; ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವ ಮೂಲಕ ಶರಣರಲ್ಲಿ ಕಾಯಕ, ದಾಸೋಹ, ಪ್ರಸಾದ ಕುರಿತು  ಬಸವಣ್ಣನವರು ಪ್ರಜ್ಞೆ ಮೂಡಿಸಿದರು ಎಂದು ಶರಣೆ ವಸಂತಕ್ಕ ಗಡಕರಿ ಹೇಳಿದರು.
ಅವರು ಹನ್ನೆರಡನೆಯ ಶತಮಾನದ ಶರಣೆಯರ ಕಾಯಕ ನಿಷ್ಠೆ ” ವಿಷಯದ ಕುರಿತು  ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ   ಹಮ್ಮಿಕೊಂಡಿದ್ದ ” ಮಾಸಿಕ ಅನುಭಾವ ಗೋಷ್ಠಿ ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
   ತನ್ನಕ್ಕನಿಗೆ ಇಲ್ಲದ ಧಾರ್ಮಿಕ ವಿಧಿ ವಿಧಾನಗಳು ನನಗೇಕೆ ? ಹೆಣ್ಣು ಗಂಡೆಂಬ ಭೇಧ ಏಕೆ ? ಎಂಬ ವಿಚಾರವು ತಮ್ಮ ಎಂಟನೆಯ ವಯಸ್ಸಿನಲ್ಲಿ  ಅನಿಸಿದಾಗ ತಮ್ಮ ಅಕ್ಕ ನಾಗಮ್ಮನ ಜೊತೆಗೆ  ಮನೆಬಿಟ್ಟು ಹೊರಟ ಕ್ರಾಂತಿಯೋಗಿ  ಬಸವಣ್ಣನವರು ಮುಂದೆ ಬಿಜ್ಜಳನ ಆಸ್ಥಾನದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಮೂಢನಂಬಿಕೆ,ಕಂದಾಚಾರಗಳನ್ನು ವಿರೋದಿಸಿದರು. ಅಕ್ಕ ನಾಗಮ್ಮನವರು ದಲಿತ ಕೇರಿಗಳಿಗೆ ಹೋಗಿ ಅನುಭವ ಮಂಟಪಕ್ಕೆ ದಲಿತ ಸ್ತ್ರೀಯರನ್ನು ಕರೆತಂದರು.ಅವರಿಗೆ ಅಕ್ಷರದ ಬೀಜಗಳ ಬಿತ್ತಿದರು.ಹಲವಾರು ಶರಣ ಶರಣೆಯರು ಅಕ್ಷರ ಕಲಿತು ವಚನ ರಚಿಸಿದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅದ್ಯಕ್ಷರಾದ ಬಸವರಾಜ ರೊಟ್ಟಿ ಅವರು ಜಾಗತಿಕ ಲಿಂಗಾಯತ ಮಹಾಸಭಾದ ಮೂಲ ಉದ್ದೇಶ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯುವದು,ಎಲ್ಲಾ  ಒಳಪಂಗಡಗಳನ್ನು ಒಂದುಗೂಡಿಸುವದು, ಉಚಿತ ವಧು ವರರ ಮಾಹಿತಿ ಕೇಂದ್ರಗಳ ಸ್ಥಾಪನೆ ಹೀಗೆ ಹಲವಾರು ಸಮಾಜಪರ ಚಿಂತನೆಯ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಸಮರ್ಪಕವಾದ ಯೋಜನೆಯನ್ನು ಹಮ್ಮಿಕೊಂಡಿದೆ ಅಂತಾ ಹೇಳಿದರು.
       ಸಿರಸಂಗಿಯ ಚರಂತೇಶ್ವರ ಮಠದ  ಶ್ರೀ ಸಂಗಮೇಶ ದೇವರು ಕಾರ್ಯಕ್ರಮದ ಸಾನಿದ್ಯ ವಹಿಸಿ ,ಬಸವಾದಿ ಶರಣರ ವಚನಗಳನ್ನು ತಮ್ಮ ಮಕ್ಕಳಿಗೆ ಹೇಳಿ ಕೊಡುವ ಜವಾಬ್ದಾರಿಯನ್ನು  ವಹಿಸಿಕೊಳ್ಳಲು ತಾಯಂದರಿಗೆ  ಸೂಚಿಸಿದರು.
       ಇಂದಿನ ಪ್ರಸಾದ ದಾಸೋಹಿಗಳಾದ ಶರಣೆ ಸುರೇಖಾ ಪ್ರಕಾಶ ಪಾಟೀಲ ದಂಪತಿ ಷಟ್ ಸ್ಥಲ ಧ್ವಜಾರೋಹಣ ಮಾಡಿದರು.ಜಾಗತಿಕ ಲಿಂಗಾಯತ ಮಹಾಸಭಾದ ಮಹಾನಗರ ಘಟಕದ ಪ್ರ.ಕಾರ್ಯದರ್ಶಿ ಶರಣ ಚಂದ್ರಪ್ಪ ಬೂದಿಹಾಳ ಅವರು ಪ್ರಾಸ್ತಾವಿಕ ಮಾತನಾಡುತ್ತಾ ಸರ್ವರನ್ನು ಸ್ವಾಗತಿಸಿದರು.ತಾಲೂಕಾ ಮಹಿಳಾ ಘಟಕದ ಅದ್ಯಕ್ಷೆ ಶರಣೆ ಅನಿತಾ ಚಟ್ಟರ ಅವರು ಶರಣು,ಸಮರ್ಪಣೆ  ಸಲ್ಲಿಸಿದರು.ಮಹಿಳಾ ಘಟಕದ ಪದಾಧಿಕಾರಿ ಶರಣೆ ಶೋಭಾ ಶಿವಳ್ಳಿ ಅವರು ನಿರೂಪಿಸಿದರು.
   ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ,ನಗರ ಘಟಕದ ಅಧ್ಯಕ್ಷ ಎಸ್.ಜಿ.ಸಿದ್ನಾಳ,ಮೋಹನ ಗುಂಡ್ಲೂರ,ಮುರಿಗೆಪ್ಪ ಬಾಳಿ,ಸುಜಾತಾ ಮತ್ತಿಕಟ್ಟಿ,ನಯನಾ ಗಿರಿಗೌಡರ,ಅನ್ನಪೂರ್ಣ ಮಳಗಲಿ,ಡಾ.ಅಡಿವೆಪ್ಪ ಇಟಗಿ,ಎಫ್.ಆರ್.ಪಾಟೀಲ,ಈರಣ್ಣ ಚಿನಗುಡಿ,ಕಾವೇರಿ ಕಿಲಾರಿ,ರತ್ನಾ ಬೆಣಚಮರ್ಡಿ, ಸುಧಾ ರೊಟ್ಟಿ, ಮಹಾಂತೇಶ ತೋರಣಗಟ್ಟಿ,ಬಿ.ಡಿ. ಪಾಟೀಲ, ಬೀದರನ ಡಾ.ಬಸವರಾಜೇಶ್ವರಿ, ಸುವರ್ಣ ಚಿಮಕೂಡೆ ಅಲ್ಲದೇ  ವಿವಿಧ ಬಡಾವಣೆಯ ಬಸವಾಭಿಮಾನಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!