This is the title of the web page
This is the title of the web page

Please assign a menu to the primary menu location under menu

Local News

ಬದಲಾವಣೆಗಾಗಿ ಬಿಜೆಪಿ ಬೆಂಬಲಿಸಿ : ಬಸವರಾಜ ಬೊಮ್ಮಾಯಿ


ಯಮಕನಮರಡಿ:- ಯಮಕನಮರಡಿ ಮತಕ್ಷೇತ್ರವನ್ನು ಪ್ರತಿ£ಧಿಸುತ್ತಿರುವ ಕಾಂಗ್ರೇಸ ಮುಖಂಡರ ವ್ಯವಸ್ಥೆ ಕುರಿತು ಜನರು ಬೇಸರಪಟ್ಟಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರನ್ನು ಗೆಲ್ಲಿಸುವುದರ ಮೂಲಕ ೨೦೨೩ರ ಈ ವಿಧಾನಸಭಾ ಚುನಾವಣೆಯು ಐತಿಹಾಸಿಕ ಚುನಾವಣೆಯಾಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಬುಧವಾರ ದಿ. ೨೬ ರಂದು ಯಮಕನಮರಡಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರ ಪರವಾಗಿ ಮತಯಾಚಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಯಾದ ಬಸವರಾಜ ಹುಂದ್ರಿಯವರು ಒಬ್ಬ ಸಾಮಾನ್ಯ ರೈತನ ಮಗನಾಗಿದ್ದು, ಕ್ಷೇತ್ರದಲ್ಲಿ £ಷ್ಠೆ ಪ್ರಾಮಾಣಿಕತೆಯಿಂದ ಪಕ್ಷವನ್ನು ಸಂಘಟಿಸಿ ಬೆಳಸಿದ್ದರಿಂದ ಅವರನ್ನು ಪಕ್ಷದ ವರಿಷ್ಠರು ಟೀಕೇಟು £Ãಡಿದ್ದು, ಈ ಚುನವಣೆಯಲ್ಲಿ ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ದಿ ಮಾಡಲು ಅನುವು ಮಾಡಿಕೊಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವ ರಾಜ್ಯಕ್ಕೂ ಕಾಲಿಟ್ಟಾಗ ಅಲ್ಲಿ ಕಾಂಗ್ರೇಸ್ ಮುಕ್ತ ರಾಜ್ಯವಾಗುತ್ತಿದ್ದು, ಇದರಿಂದ ಕಾಂಗ್ರೇಸಿಗರಲ್ಲಿ ಭಯ ಉಂಟಾಗಿದೆ. ಸಮಗ್ರ ಅಭಿವೃದ್ದಿಗಾಗಿ ದೇಶದಲ್ಲಿಂದು ಡಬಲ್ ಎಂಜಿನ ಸರ್ಕಾರಗಳು ಅವಶ್ಯವಾಗಿ ಬೇಕಾಗಿದ್ದು, ಆದರೆ ಕಾಂಗ್ರೇಸಿಗರು ಡಬಲ್ ಎಂಜಿನ ಸರ್ಕಾರ ಬೇಡ ಎಂದು ಹೇಳುತ್ತಿದ್ದಾರೆ. ಅವರಿಗೆ ಅಭಿವೃದ್ದಿಕ್ಕಿಂತ ಅಧಿಕಾರ ಮುಖ್ಯವಾಗಿದೆ ರಾಜ್ಯಕ್ಕೆ ಪ್ರಧಾನ ಮಂತ್ರಿಗಳು ಏಕೆ ಬರುತ್ತಾರೆ ಎಂದು ಪ್ರಶ್ನೆ ಮಾಡುತ್ತಾರೆ. ನಾವು ಎಂದೂ ರಾಹುಲಗಾಂದಿ ಪ್ರೀಯಾಂಕಾಗಾಂದಿ ರಾಜ್ಯಕ್ಕೆ ಏಕೆ ಬರುತ್ತಾರೆಂದು ಕೇಳಿದಲ್ಲ. ರಾಜ್ಯಕ್ಕೆ ರಾಹುಲ ಗಾಂಧಿ ಬಂದಷ್ಟು ಬಿಜೆಪಿಗೆ ಅನುಕೂಲವಾಗಿದೆ. ಕೆಂದ್ರ ಸರ್ಕಾರ ಕಿಸಾನ ಸಮ್ಮಾನ ಯೋಜನೆಯಲ್ಲಿ ೫೪ ಲಕ್ಷ ರೈತರಿಗೆ ನೇರವಾಗಿ ೧೬ ಸಾವಿರ ಕೋಟಿ ಅನುದಾನ £Ãಡಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೇಸ್ ಪಕ್ಷವು ವೋಟಬ್ಯಾಂಕ ಮಾಡುತ್ತಿದ್ದು, ಮೀಸಲಾತಿ ಕುರಿತು ಹಿಂಬಾಗಿಲಿ£ಂದ ಕೋರ್ಟಗೆ ಹೋಗಿದ್ದಾರೆ.
ಬಡಮುಸ್ಲಿಂರಾದ ಪಿಂಜಾರ ನಧಾಪ ಜನಾಂಗದವರಿಗೆ ಮೀಸಲಾತಿ £Ãಡಲಾಗಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ £Ãಡಲು ಸಂವಿದಾನದಲ್ಲಿ ಅವಕಾಶವಿಲ್ಲವೆಂದು ಸಂವಿಧಾನದಲ್ಲಿ ಉಲ್ಲೇಖವಿದೆ. ರಾಜ್ಯ ಬಿಜೆಪಿ ಸರ್ಕಾರವು ಮಾಡಿರುವ ಮೀಸಲಾತಿ ದೇಶದಲ್ಲಿ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ ಇತ್ತೀಚೆಗೆ ಬಿಜೆಪಿಯಲ್ಲಿದ್ದ ಮುಖಂಡರೊಬ್ಬರು ಟಿಕೇಟ ಸಿಗದೆ ಎಂಬ ಕಾರಣಕ್ಕಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಚುನಾವಣೆಗೆ £ಂತಿದ್ದಾರೆ. ಈ ಚುನಾವಣೆಯಲ್ಲಿ ಬಸವರಾಜ ಹುಂದ್ರಿಯವರನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ಕೇಳಿಕೊಂಡರು. ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಮಾತನಾಡಿದರು.
ಈ ವೇಳೆಯಲ್ಲಿ ಸಚಿವ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ನ್ಯಾಯವಾದ ಎಮ್.ಬಿ.ಜಿರಲಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ರಾಜೇಶ ನೇರ್ಲಿ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಯಮಕನಮರಡಿ ಬಿಜೆಪಿ ಮಂಡಳದ ಅಧ್ಯಕ್ಷರಾದ ಶ್ರೀಶೈಲ ಯಮಕನಮರಡಿ, ಅಪ್ಪಯ್ಯ ಜಾಜರಿ, ಸಿದ್ದಲಿಂಗ ಸಿದ್ದಗೌಡರ ರವಿ ಹಂಜಿ, ಬಸವರಾಜ ಪೂಜೇರಿ, ಬಸವರಾಜ ಬರಗಾಲಿ, ಚಂದ್ರಕಾಂತ ಕಾಪಸಿ, ಈರಣ್ಣಾ ಗುರವ, ಮುಂತಾದವರು ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿ ದಾದಬಾನಹಟ್ಟಿಯಿಂದ ಯಮಕನಮರಡಿ ಗ್ರಾಮದವರೆಗೆ ಭರ್ಜರಿ ರೋಡ ಶೋ ನಡೆಯಿತು.


Leave a Reply