This is the title of the web page
This is the title of the web page

Please assign a menu to the primary menu location under menu

Local News

ಭಾಷೆಯ ಗಟ್ಟಿತನದಿಂದಲೇ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಸಾಧ್ಯ – ಬಸವರಾಜ ನಾಲತವಾಡ


 ಬೆಳಗಾವಿ; ಪ್ರಾಥಮಿಕ ಮತ್ತು ಹಂತದಲ್ಲಿ ಮಗುವಿಗೆ ಕನ್ನಡ ಭಾಷಾ ವಿಷಯದಲ್ಲಿ ಹಿಡಿತವಿದ್ದರೆ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಸಾಧ್ಯ. ಆ ನಿಟ್ಟಿನಲ್ಲಿ ಭಾಷಾ ಶಿಕ್ಷಕರು ಭಾಷೆಯ ಭದ್ರಬುನಾದಿ ಹಾಕುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಬುಧವಾರ ದಿ.23 ರಂದು ಬೆಳಗಾವಿ ಗ್ರಾಮೀಣ ವಲಯದ ಶಿಕ್ಷಕರಿಗೆ ಬೆಳಗಾವಿ ತಾಲೂಕಿನ ಕಾಕತಿಯ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ವಲಯದ ಕನ್ನಡ ಭಾಷಾ ಶಿಕ್ಷಕರಿಗೆ  ಹಮ್ಮಿಕೊಳ್ಳಲಾದ ಕನ್ನಡ ವಿಷಯಧಾರಿತ ಒಂದು ದಿನದ ಕಾರ್ಯಗಾರದಲ್ಲಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
   ಮಗುವಿನ ಭಾಷಾ ಕೌಶಲ್ಯ ವೃದ್ಧಿಯ ಜೊತೆಗೆ ಮಗುವಿಗೆ ಕುತೂಹಲ ಬೆಳೆಸುವ ಮತ್ತು ಪ್ರಾಯೋಗಿಕ ಜ್ಞಾನ ನೀಡುವ ಮತ್ತು ಆಸಕ್ತಿ ಕೆರಳಿಸುವ ವಿಷಯಗಳ  ಕುರಿತಾದ ಮಾಹಿತಿ ಒದಗಿಸಿ ಅವರ ಭವಿಷ್ಯದ ಹಾದಿ ಏನು ಎಂಬುದನ್ನು ತಿಳಿಸಿದಾಗ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಸಹ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವುದು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ  ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಮಿಲ್ಲಾನಟ್ಟಿ ಮಾತನಾಡಿ        ಮಗುವಿನ  ಕೋರ್ ವಿಷಯಗಳ ಅಭಿವೃದ್ಧಿ ಭಾಷೆಯ ಗಟ್ಟಿತನದಲ್ಲಿಯೇ ಇರುವುದರಿಂದ ಭಾಷಾ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ಮಗುವಿನ ಸಂಪೂರ್ಣ ಶೈಕ್ಷಣಿಕ ವೃದ್ಧಿಗೆ ವ್ಯಾಕರಣಬದ್ಧವಾದ   ಕನ್ನಡ ಭಾಷೆಯನ್ನು ಕಲಿಸಲು ಇನ್ನಷ್ಟು ವಿಶೇಷ ಕಾಳಜಿ ತೆಗೆದುಕೊಳ್ಳಬೇಕು ಎಂದರು. ಶಿಕ್ಷಣಾಧಿಕಾರಿ ಆರ್ ಟಿ ಬಳಿಗಾರ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಭಾಷಾ ಅಭಿವೃದ್ಧಿಗೆ ತಂತ್ರಾಂಶಗಳನ್ನು ತೆಗೆದುಕೊಂಡು ಸಾಗಿದಾಗ ಸುಧಾರಣೆ ಸಾಧ್ಯ ಎಂದರು. ಬೆಳಗಾವಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಹಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ನಾಡು,ನುಡಿ ಮೇಲಿನ ಕಾಳಜಿಗಾಗಿ ಮಕ್ಕಳಲ್ಲಿ ಕನ್ನಡತನವನ್ನು ಗಟ್ಟಿಗೊಳಿಸಬೇಕು ಗಡಿ ಭಾಗದಲ್ಲಿ ಕನ್ನಡವನ್ನು ಬೆಳೆಸುವ ಕೈಂಕರ್ಯ ಭಾಷಾ ಶಿಕ್ಷಕರು ತೊಡಬೇಕು ಎಂದರು.  ಕಾಕತಿ ಪ್ರೌಢಶಾಲಾ ಮುಖ್ಯಾಧ್ಯಾಪಕ  ಅಶೋಕ ಖೋತ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಗಾರದಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ದಾಸಪ್ಪನವರ, ಬಿ ಆರ್ ಸಿ.ಎಮ್ ಎಸ್ ಮೇದಾರ ಕಾರ್ಯಗಾರ ಮತ್ತು ಅವುಗಳನ್ನು ಶಾಲಾ ಹಂತದಲ್ಲಿ ಅನುಷ್ಠಾನದ  ಕುರಿತಾಗಿ ಮಾತನಾಡಿದರು  ಕನ್ನಡ  ಭಾಷಾ ವಿಷಯದ ನೋಡಲ್ ಅಧಿಕಾರಿಯಾಗಿ ದೀಪಾ ನಾಯಕ ಸಂಪನ್ಮೂಲ ವ್ಯಕ್ತಿಗಳಾಗಿ ಚಂದ್ರಶೇಖರ ಪೂಜಾರ, ರಾಮು ಗುಗ್ಗವಾಡ,ಎಂ.ಎ ಕೋರಿಶೆಟ್ಟಿ,  , ಬಿ ಎನ್ ಮಡಿವಾಳರ, ಗೀತಾ ಖಾನಟ್ಟಿ, ಶಶಿಕಲಾ ಹೊಸೂರ,ನೀತಾ ಯಲಜಿ, ಕುಮಾರ ಪಾಟೀಲ, ಜಮುನಾ ಕೋಳಿ, ಕೃಷ್ಣ ಕುರುಬರ, ಉಪಸ್ಥಿತರಿದ್ದರು.  ಕಾರ್ಯಕ್ರಮದ ಆರಂಭದಲ್ಲಿ ಲಲಿತಾ ಮಹಾಜನಶೆಟ್ಟಿ ಸ್ವಾಗತಿಸಿದರು,ಶಿವಾನಂದ ತಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಿತ್ರಾ ಕರವಿನಕೊಪ್ಪ  ನಿರೂಪಿಸಿದರು ಕೊನೆಯಲ್ಲಿ ಮಹೇಶ ಅಕ್ಕಿ ವಂದಿಸಿದರು.

Leave a Reply