WhatsApp Group
Join Now
ಬೆಳಗಾವಿ; ವಚನಗಳ ಕಂಠಪಾಠ ಮಾಡುವುದರಿಂದ ಮಕ್ಕಳಲ್ಲಿ ಸ್ಮರಣ ಶಕ್ತಿ ವೃದ್ಧಿಸುತ್ತದೆ. ಅದರೊಂದಿಗೆ ಉತ್ತಮ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬೆಳೆಯಲು ಸಹಕಾರ ನೀಡುತ್ತವೆ. ಬಸವಾದಿ ಶರಣರ ಕಾಯಕ, ದಾಸೋಹ,ಅನುಭವ, ಅನುಭಾವದಿಂದ ವಚನಗಳು ಮೂಡಿ ಬಂದಿವೆ.ಮನುಷ್ಯನಲ್ಲಿರುವ ಮೌಡ್ಯವನ್ನು ವಚನಗಳು ದೂರಮಾಡಿ ಬಾಳಲ್ಲಿ ಬೆಳಕು ನೀಡುತ್ತವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣ ಬಸವರಾಜ ರೊಟ್ಟಿ ಹೇಳಿದರು.
ಇವರು ರವಿವಾರ ದಿನಾಂಕ 2 -3 -2025 ರಂದು ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಮಹಾನಗರ ಹಾಗೂ ತಾಲೂಕ ಘಟಕಗಳು ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಶಿವಬಸವ ನಗರ ಬೆಳಗಾವಿಯಲ್ಲಿ ಏರ್ಪಡಿಸಿದ ಬೆಳಗಾವಿ ತಾಲೂಕ ಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹೇಳಿದರು.
70 ಜನ ಮಕ್ಕಳು ಹಾಗೂ ವಯಸ್ಕರರು ಭಾಗವಹಿಸಿದ ವಚನ ಕಂಠಪಾಠ ಸ್ಪರ್ಧೆಯಲ್ಲಿ 180 ವಚನ ಹೇಳಿದ ಕುಮಾರ ಶ್ರೇಯಸ್ಸ ಕುರಗುಂದಿ ಪ್ರಥಮ ಸ್ಥಾನ,97 ವಚನ ಹೇಳಿದ ಶ್ರವಣಕುಮಾರ ದೇವರಮನಿ ದ್ವಿತಿಯ ಸ್ಥಾನ,96 ವಚನ ಹೇಳಿದ ಸುಪ್ರೀತಾ ಕುಂಬಾರ ತೃತಿಯ ಸ್ಥಾನ ಗಳಿಸಿದರು.ಈ ಮೂರು ಜನ ವಿಜೇತರಿಗೆ ಮುಂಬರುವ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಬಹುಮಾನಗಳನ್ನು ವಿತರಣೆ ಮಾಡಲಾಗುವುದೆಂದು ತಿಳಿಸಿದರು ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
ಪ್ರಾರಂಭದಲ್ಲಿ ಜಾಲಿಂ ಮಹಾಸಭಾದ ಮಹಾ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ.ಬೂದಿಹಾಳ ಸ್ವಾಗತಿಸಿದರು.ಸಂಚಾರಿ ಗುರು ಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ಸ್ಪರ್ಧಾ ನಿಯಮಗಳನ್ನು ತಿಳಿಸಿದರು. ಬೆಳಗಾವಿ ಜಿಲ್ಲಾ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ರಾಜಶೇಖರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಘಟಕದ ಅಧ್ಯಕ್ಷರಾದ ಬಿ.ಜಿ ವಾಲಿಇಟಗಿ, ಪ್ರಾಯೋಜಕರಾದ ಬಸವರಾಜ ಮಿಂಡೊಳ್ಳಿ ಹಾಗೂ ಜಿಲ್ಲಾ ಖಜಾಂಚಿ ಮುರಿಗೆಪ್ಪ ಬಾಳಿ ವೇದಿಕೆಯ ಮೇಲಿದ್ದರು.
ಜಾ.ಲಿಂ ಮಹಾಸಭಾದ ಪದಾಧಿಕಾರಿಗಳಾದ ಆನಂದ ಕೊಂಡಗುರಿ,ಎಫ್. ಆರ್ ಪಾಟೀಲ,ಈರಣ್ಣ ಚಿನಗುಡಿ, ಸುಜಾತಾ ಮತ್ತಿಕಟ್ಟಿ,ನೈನಾ ಗಿರಿಗೌಡರ,ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ,ಮಹಾದೇವಿ ಬೂದಿಹಾಳ,ಕೆಂಪಣ್ಣಾ ರಾಮಾಪುರಿ,ನೇತ್ರಾವತಿ ರಾಮಾಪುರಿ,ಭಾರತಿ ಪವಾಡೆಪಗೋಳ, ಮಹಾನಂದಾ ಪಾರುಶೆಟ್ಟಿ, ರಾಜಶ್ರೀ ದೇಯನ್ನವರ,ಶರಣ ಲಾಳಸಂಗಿ,ಎನ್.ಪಿ.ಉಪ್ಪಿನ,ಬಾಬುಗೌಡ ಪಾಟೀಲ,ಶರಣ ಹಿರೇಹೊಳಿ,ಸಿ ಎಮ್ ಹುಬ್ಬಳ್ಳಿ,ಪಿ ಎ ರೊಟ್ಟಿ, ಮುಂತಾದ ಮಹಾಸಭಾ ಹಾಗೂ ಸಂಚಾರಿ ಗುರುಬಸವ ಬಳಗದ ಸದಸ್ಯರು,ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.