This is the title of the web page
This is the title of the web page

Please assign a menu to the primary menu location under menu

Local News

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಅರಳಿದ ಕಮಲ ಗೆಲುವಿನ ನಗೆ ಬೀರಿದ ಬಸವರಾಜ ಹೊರಟ್ಟಿ


ಬೆಳಗಾವಿ: ವಿಧಾನ ಪರಿಷತ್​ನ ಪಶ್ಚಿಮ ಶಿಕ್ಷಕರ ಕ್ಷೇತ್ರವು ಮತ್ತೆ ಕಮಲದ ತೆಕ್ಕೆಗೆ ಸೇರಿದೆ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಿ ಬಸವರಾಜ ಹೊರಟ್ಟಿ ವಿಜಯ ಪತಾಕೆ ಹಾರಿಸಿದ್ದು ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆ ಬಾಕಿ ದ್ದು 7501 ಮತಗಳನ್ನು ಪಡೆಯುವ ಮೂಲಕ ಮೊದಲ ಪ್ರಾಶಸ್ತ್ಯದಲ್ಲೇ ಬಸವರಾಜ ಹೊರಟ್ಟಿ ಗೆಲುವಿನ ನಗು ಬೀರಿದ್ದಾರೆ.

ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು 1890ರಿಂದ 2022 ರವರೆಗೆ ನಿರಂತರವಾಗಿ ಗೆಲುವು ಸಾಧಿಸಿದ್ದೇನೆ. ಈ ಗೆಲುವು ಶಿಕ್ಷಕರದ್ದು ಎಂದರು. ಈ ಬಾರಿ ಚುನಾವಣೆಯಲ್ಲಿ 8 ರಿಂದ 10 ಸಾವಿರ‌ ಮತಗಳ ಬರುವ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಇದೀಗ 7 ಸಾವಿರ ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದೇನೆ. ಇನ್ನೂ 2 ಸಾವಿರ‌ ಮತಗಳು ಬರುವ ನಿರೀಕ್ಷೆಯಿದೆ ಎಂದರು.


Gadi Kannadiga

Leave a Reply