This is the title of the web page
This is the title of the web page

Please assign a menu to the primary menu location under menu

State

ಮಹಿಳೆಗೆ ಪ್ರಥಮವಾಗಿ ಸ್ವಾತಂತ್ರ್ಯ ಕೊಟ್ಟವರು  ಬಸವೇಶ್ವರರು :ಡಾ.ನಿರ್ಮಲಾ ಬಟ್ಟಲ


ಮಹಿಳೆಗೆ ಪ್ರಥಮವಾಗಿ ಸ್ವಾತಂತ್ರ್ಯ ಕೊಟ್ಟವರು  ಬಸವೇಶ್ವರರು  :ಡಾ.ನಿರ್ಮಲಾ ಬಟ್ಟಲ

ಬೆಳಗಾವಿ-: ಮಹಿಳೆಗೆ ಪ್ರಥಮವಾಗಿ ಸ್ವಾತಂತ್ರö್ಯ ಕೊಟ್ಟವರು ಶ್ರೀ.ಜಗಜ್ಯೋತಿ ಬಸವೇಶ್ವರರು ಮತ್ತು ಕನ್ನಡದ ಶರಣರು ಎಂದು ಡಾ.ನಿರ್ಮಲಾ ಬಟ್ಟಲ ಹೇಳಿದರು.
ಅವರು ಲಿಂಗಾಯತ ಕ್ಷೇಮಾಭಿ ವೃದ್ಧಿ ಸಂಘದ ವಾರದ ಸತ್ಸಂಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾತನಾಡುತ್ತಿದ್ದರು. ಮಹಿಳೆಗೆ ಕೇವಲ ಪೂಜನೀಯ ಸ್ಥಾನಮಾನಗಳನ್ನು ಕೊಟ್ಟು ಅವಳನ್ನು ಹಕ್ಕು ವಂಚಿತಳನ್ನಾಗಿ ಮಾಡದೆ ಅವಳಿಗೆ ಪ್ರಾಯೋಗಿಕ ಅವಕಾಶಗಳನ್ನು ಕೊಡಬೇಕು,ಭೂಮಿ ಮೇಲೆ ಇರುವ ಎಲ್ಲ ರಾಷ್ಟ್ರಗಳ ಇತಿಹಾಸವನ್ನು ತೆಗೆದು ನೋಡಿದಾಗ ಎಲ್ಲ ರೀತಿಯ ಸ್ಥಾನಮಾನಗಳನ್ನು, ಅವಕಾಶಗಳನ್ನು ಮಹಿಳೆಗೆ ಪ್ರಾಯೋಗಿಕವಾಗಿ ಅವಕಾಶವನ್ನು ಕೊಟ್ಟಿರುವುದು ಕರ್ನಾಟಕದ ಹನ್ನೆರಡನೆಯ ಶತಮಾನದ ಶರಣರು ಮಾತ್ರ, ಬಸವಣ್ಣನವರು ತಮ್ಮ ಮನೆಯಿಂದಲೇ ಮಹಿಳೆಗೆ ನಿಜವಾದ ಸ್ವಾತಂತ್ರ‍್ಯ ಕೊಡುವ ಹೋರಾಟ ಮಾಡಿದರು ಅಕ್ಕ ಮಹಾದೇವಿಯವರಿಂದಲೇ ಅನುಭವ ಮಂಟಪದಲ್ಲಿ ಪ್ರಾರಂಭವಾಯಿತು. ಸಾಕಷ್ಟು ಸ್ತ್ರೀಯರು ಅದರ ಸದುಪಯೋಗ ಪಡೆದು ಶರಣೆಯರಾದರು ಅವರಲ್ಲಿ ಶರಣ ಲಿಂಗಮ್ಮ ಶರಣ ಆಯ್ದಕ್ಕಿ ಲಕ್ಕಮ್ಮ ಸತ್ಯಕ್ಕ ಮುಂತಾದ ಶರಣರು ತಮ್ಮ ವಚಣಗಳ ಮೂಲಕ ಶರಣರ ಮನ್ನಣೆ ಪಡೆದರು.
ಆದರೆ ಅದು ಕಾಲಗತಿಯಲ್ಲಿ ಮುಂದೆವರೆಯದೆ ಮತ್ತೆ ಸ್ತ್ರೀ ತನ್ನ ಸ್ವಾತಂತ್ರ‍್ಯವನ್ನು ಕಳೆದುಕೊಂಡು ಶೋಚನೀಯ ಸ್ಥಿತಿಗೆ ತಲುಪಿದಳು. ಆದರೆ ಕಾಲ ಈಗ ಬದಲಾಗಿ ಪುನಃ ತನ್ನ ಹಕ್ಕುಗಳ ಹೋರಾಟ ಮಾಡಿ ತನ್ನ ಸ್ಥಾನವನ್ನು ಪಡೆಯುತ್ತಿದ್ದಾಳೆ,
ನಾವು ಶರಣರ ವಚನಗಳನ್ನು ಅಧ್ಯಯನ ಮಾಡಿ ಸ್ತ್ರೀಗೆ ಪ್ರಾಯೋಗಿಕ ಸ್ಥಾನಮಾನಗಳನ್ನು ನೀಡಬೇಕು ಅದು ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಸ್ತ್ರೀಯರ ಕುರಿತು ಇರುವ ಶರಣ ಸಾಹಿತ್ಯವನ್ನು ವಿಶ್ವ ಸಾಹಿತ್ಯವನ್ನಾಗಿ ಬೆಳೆಸಬೇಕು, ಕೇವಲ ಸ್ತ್ರೀಗೆ ಗೌರವ ಸ್ಥಾನ ಕೊಟ್ಟು ದೂರು ಸರಿಸದೆ ಅವಳಿಗೂ ಅವಕಾಶಗಳನ್ನು ಕೊಟ್ಟಾಗ ಮಾತ್ರ ವಿಶ್ವ ಮಹಿಳಾ ದಿನದ ಆಚರಣೆಯುಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾನಿಧ್ಯ ವಹಿಸಿದ ಮೃತ್ಯಂಜಯ ಸ್ವಾಮಿಜೀಯವರು ಆಶಿರ್ವಚಣ ಮಾಡಿ ೧೨ನೇ ಶತಮಾನದ ಶರಣರು ಸ್ತಿçÃಗೆ ಸ್ವಾತಂತ್ರö್ಯ ನೀಡಿದರು, ಇಲ್ಲಿಯವರೆಗೆ ಸಪೂರ್ಣ ಸಾಂತAತ್ರö್ಯ ಸಿಗುತಿಲ್ಲವೆಂದು ತಿಳಿಸಿದರು.ಮುಖ್ಯ ಅಥಿತಿಗಳಾಗಿ ಆಗಮಿಸಿದ ಶರಣ ಬಸವರಾಜ ರೊಟ್ಟಿ ನ್ಯಾಯವಾದಿಗಳು ಮತ್ತು ಜಾಗತಿಕ ಲಿಂಗಾಯತ ಮಹಾ ಸಭಾ ಬೆಳಗಾವಿ ಮಾತನಾಡಿ ೧೨ ನೇ ಶತಮಾನದಲ್ಲಿ ಸ್ತಿçÃಗೆ ಸ್ವಾತಂತ್ರö್ಯ ನೀಡಿದರು ಆದರೆ ಈಗ ರಾಜಕೀಯದಲ್ಲಿ ೩೩% ನೀಡಿದರೆ ಉದಾ; ಕರ್ನಾಟಕ ರಾಜ್ಯ ವಿಧಾನ ಸಭೆಯಲ್ಲಿ ೭೦ ಜನ ಮಹಿಳೆಯರು ವಿಧಾನ ಸಭಾ ಸದಸ್ಯರಾಗುತ್ತಾರೆ, ನೀಡದೆ ಇರುವುದು ವಿಶಾದನಿಯ ಎಂದು ಒತ್ತಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಎಸ್.ಜಿ. ಸಿದ್ನಾಳರು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಸಹ್ಯಾದ್ರಿ ನಗರ, ಕುವೆಂಪು ನಗರದಲ್ಲಿ ೨೦೧೧ ಮೇ ದಲ್ಲಿ ಸ್ಥಾಪಿತವಾಯಿತು. ೨೦೧೧ ರಿಂದ ೨೦೨೨ರವರೆಗೆ ೪೯೭ ಶಿವಾನುಭವ ಘೋಷ್ಠಿಗಳನ್ನು ನಡೆಸಿದ್ದೇವೆ. ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ಮನ ಮನಂಗಳಲ್ಲಿ ಮನೆ ಮನೆಗೆ ತೆರಳಿ ವಚನ ಗೋಷ್ಠಿ, ಲಿಂಗಪೂಜೆ ಶರಣತತ್ವದ ಬಗ್ಗೆ ತಿಳಿಸಲಾಗುತ್ತಿದೆ.(ಲಿಂಗಾಯತ ಧರ್ಮದ ಪ್ರಚಾರ) ಪ್ರತಿ ವರ್ಷ ಬಸವ ಜಯಂತಿ ಆಚರಿಸಿ ಜನರಿಗೆ ಜಾಗ್ರತೆಯನ್ನು ಮೂಡಿಸುತ್ತೇವೆ ಎಂದು ತಿಳಿಸಿದರು.ಲಿಂಗಾಯತ ಕ್ಷೇಮಾಬಿವೃದ್ಧಿ ಸಂಘದ ಮಹಿಳೆಯರು ಲಕ್ಕುಂಡಿ ಶರಣೆಯರ ಕಿರು ನಾಟಕ ಪ್ರದರ್ಶಿದರು.
ಸಮಾರಂಭದಲ್ಲಿ ಶೆಟ್ಟಿ, ಕಟ್ಟಿಮನಿ ,ರುದ್ರಗೌಡ ಗುರÀವನ್ನವರÀ ಪಾಟೀಲ್, ಸಂಕೇಶ್ವರ ಶ್ರೀಮತಿ ಶಿವಳ್ಳಿ, ಸಂಕೇಶ್ವರ, ಪಾಟೀಲ್, ಕಳಸಣ್ಣವರ ಕಮಾರಿ ಮೇಘಾ ಕಮತೆ ಬಿಡಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.ನಿರೂಪನೆ: ಶರಣ ಎಸ್.ಬಿ.ಲಾಳಸಂಗಿ ಗುರುಗಳು,ಸ್ವಾಗತ: ಶರಣ ದುಂಡಪ್ಪ ಸಂಕೇಶ್ವರ, ಶರಣೆ ಸುನೀತಾ ನಂದೆನ್ನವರ ಕೊನೆಯಲ್ಲಿ ವಂದಿಸಿದರು.


Gadi Kannadiga

Leave a Reply