This is the title of the web page
This is the title of the web page

Please assign a menu to the primary menu location under menu

Local News

ಬಿವಿವಿ ಸಂಘಕ್ಕೆ ಮತ್ತೊಂದು ಗರಿಮೆ ಶೇ.63.97 ಪಲಿತಾಂಶ ಗಿಟ್ಟಿಸಿಕೊಂಡ ಬಸವೇಶ್ವರ ಕಲಾ ಪ.ಪೂ. ಮಹಾವಿದ್ಯಾಲಯ


ಬಾಗಲಕೋಟೆ: 2021-22ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಸವೇಶ್ವರ ಕಲಾ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಪಲಿತಾಂಶ ಪಡೆದಿದ್ದು ಬಸವೇಶ್ವರ ವಿದ್ಯಾವರ್ದಕ್ಕ ಸಂಘಕ್ಕೆ ಕೀರ್ತಿ ತಂದಿದ್ದಾರೆ.

ಮಹಾವಿದ್ಯಾಲಯದ ಸಮೀರ ಸುಬಂಧಿ ಪ್ರಥಮ ಸ್ಥಾನ (ಶೇ.93.5), ಸಚಿನ ಖಾರಬಾರಿ ದ್ವಿತೀಯ ಸ್ಥಾನ (ಶೇ.92.66) ಹಾಗೂ ಪ್ರಕಾಶ ಯರಂತೇಲಿ ತೃತೀಯ ಸ್ಥಾನ (ಶೇ.91.66) ಪಡೆದು ಉತ್ತಮ ಸಾಧನೆಗೈದಿದ್ದಾರೆ.

ಮಹಾವಿದ್ಯಾಲಯದ ಶೇಕಡಾವಾರು ಫಲಿತಾಂಶ 63.97% ರಷ್ಟಾಗಿದ್ದು, ಅರ್ಥಶಾಸ್ತçÀ ವಿಷಯದಲ್ಲಿ ಸಮೀರ ಸುಬಂಧಿ ವಿದ್ಯಾರ್ಥಿಯು 100 ಕ್ಕೆ 100ರಷ್ಟು ಅಂಕಗಳನ್ನು ಪಡೆದು ಕಾಲೇಜಿನ ಹೆಮ್ಮೆ ಎನಿಸಿದ್ದಾನೆ.

ಒಟ್ಟು 161 ವಿದ್ಯಾರ್ಥಿಗಳಲ್ಲಿ 103 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 19 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 23 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 25 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಸಿ ಚರಂತಿಮಠ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಎಸ್.ಸೂಳಿಭಾವಿ, ಆಡಳಿತಾಧಿಕಾರಿಗಳಾದ ವ್ಹಿ.ಆರ್.ಶಿರೋಳ, ಸಂಘದ ಗೌರವಾನ್ವಿತ ಸದಸ್ಯರು, ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.


Gadi Kannadiga

Leave a Reply