This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ರೇಲ್ವೆ ನಿಲ್ದಾಣಕ್ಕೆ ಬಸವೇಶ್ವರ ಹೆಸರಿಡಲು ಆಗ್ರಹ


ಬೆಳಗಾವಿ:ಇಂದು ಸಂಜೆ ನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಬೈಕ್ ಜಾಗೃತಿ ಜಾಥಾ ನಡೆಯಿತು, ಈ ಸಮಯದಲ್ಲಿ ನೂರಾರು ಯುವಕರು ಬೈಕ್ ಮೂಲಕ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರಂಜೀಮಠದ ಹಾಗೂ ಹುಕ್ಕೇರಿ ಹಿರೇಮಠದ ಶ್ರೀಗಳಿಂದ ಬೈಕ್ ರ್ಯಾಲಿಗೆ ಚಾಲನೆ ದೊರಕಿತು.

ಈ ಸಂಧರ್ಭದಲ್ಲಿ ಮಾತನಾಡಿದ ವೀರಶೈವ ಮಹಾಸಭಾ ಘಟಕದ ಮಹಿಳಾ ಅಧ್ಯಕ್ಷರಾದ ರತ್ನಮಾಲಾ ಬೆಲ್ಲದ ಅವರು ಬೆಳಗಾವಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬಸವ ಜಯಂತಿ ಅದ್ದೂರಿಯಾಗಿ ನಡೆಯುತ್ತಿದ್ದು, ಸಾಮಾಜದ, ನಗರದ, ಎಲ್ಲಾ ಜನರ ಸಹಕಾರವಿದೆ, ಇಂತಹ ಸಂಧರ್ಭದಲ್ಲಿ ಬೆಳಗಾವಿಯ ರೇಲ್ವೆ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರಿಡುವುದು ಸೂಕ್ತ ಎಂದರು.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೇನಕೆ ಮಾತನಾಡಿ, ಎರಡು ವರ್ಷ ಆದ ಮೇಲೆ ಜಯಂತಿ ನಡೆಯುತ್ತಿದ್ದು, ಎಲ್ಲಾ ಜನರು ಯುವಕರು ಆಸ್ತಕ್ತಿಯಿಂದ ಭಾಗಿಯಾಗಿದ್ದು ಸಂತಸ ಎಂದರು. ಬಸವಣ್ಣನವರ ತತ್ವ ಆದರ್ಶ ದೇಶದ ಮೂಲೆ ಮೂಲೆಗೂ ತಲುಪಬೇಕು ಎಂದರು.. ಆ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಎಂದು ಕರೆಕೊಟ್ಟರು.


Gadi Kannadiga

Leave a Reply