This is the title of the web page
This is the title of the web page

Please assign a menu to the primary menu location under menu

Local News

ಷೇರು ಮಾರುಕಟ್ಟೆಯ ಪ್ರಾಥಮಿಕ ತಿಳುವಳಿಕೆ ತುಂಬಾ ಅಗತ್ಯ: ಪ್ರೊ. ಎಂ. ರಾಮಚಂದ್ರ ಗೌಡ


ಬೆಳಗಾವಿ-೨೬: ಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಪಾರಂಪರಿಕ ಅನೇಕ ವಿಷಯಗಳು ಪರಿಷ್ಕೃತರೂಪದಲ್ಲಿ ಪರಿವರ್ತಿತವಾಗುತ್ತಿವೆ. ಹಾಗೆಯೇ ಹಣಕಾಸು ವ್ಯವಹಾರವು ಇಂದು ಶೈಕ್ಷಣಿಕ ಶಿಸ್ತು ಪಡೆದು ಚಿಂತನೆಗೆ ಒಳಗಾಗುತ್ತಿದೆ ಈ ಹಿನ್ನೇಲೆಯಲ್ಲಿ ಹಣದ ಗಳಿಕೆ, ಬಳಕೆ, ಮತ್ತು ಹೂಡಿಕೆಯ ಕುರಿತು ಹೊಸ ಸಾಧ್ಯತೆಗಳು ಮತ್ತು ಅವಕಾಶಗಳು ನಮ್ಮಲ್ಲಿ ಪ್ರಾಥಮಿಕ ತಿಳುವಳಿಕೆಯಾಗಿ ಮೂಡಿಬರಬೇಕಾಗಿದೆ. ಇದರಿಂದ ಷೇರುಮಾರುಕಟ್ಟೆಯ ವ್ಯವಹಾರವು ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರ ಗೌಡ ಅವರು ನುಡಿದರು.
ಬೆಳಗಾವಿಯ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸೆ÷್ಚಂಜ್ ಅಕಾಡಮಿ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರು, ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯ, ಬೆಳಗಾವಿ ಹಾಗೂ ರಾಣಿ ಪಾರ್ವತಿ ದೇವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಹಣಕಾಸು ಶಿಕ್ಷಣ ಮತ್ತು ಹೂಡಿಕೆಯ ಅರಿವು ಎಂಬ ವಿಷಯದ ಮೂಲಕ ಅಧ್ಯಾಪಕರ ಅನುಭವಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬರುವ ದಿನಗಳಲ್ಲಿ ಪದವಿಯ ಎಲ್ಲ ತರಗತಿಗಳ ಪಠ್ಯಕ್ರಮದಲ್ಲಿ ಇದನ್ನು ಅಳವಡಿಸಲಾಗುವದು ಎಂದು ನುಡಿದರು.
ಗೌರವಾಥಿತಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿಗಳಾದ ಡಾ. ಎಂ. ಜಯಪ್ಪ ಅವರು ಇಂದಿನ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಸಾಮಾನ್ಯ ಷೇರು ವ್ಯವಹಾರಗಳ ಕುರಿತು ಅಗತ್ಯ ಅನುಕೂಲತೆಗಳು ಬೇಕಾಗಿವೆ. ಹೂಡಿಕೆಯ ಜೊತೆಗೆ ಉಳಿಕೆ ಭವಿಷ್ಯತ್ತ್ನ್ನು ಉಜ್ವಲಗೊಳಿಸುತ್ತದೆ. ಈ ಹಿನ್ನಲೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಹಣಕಾಸು ವ್ಯವಹಾರ ಮತ್ತು ಹೂಡಿಕೆಯ ತಿಳುವಳಿಕೆಯನ್ನು ಎಲ್ಲ ಹಂತಗಳಲ್ಲಿ ಅಧ್ಯಯನ ಶಿಸ್ತಾಗಿ ರೂಪಸಲಾಗುವುದು ಎಂದು ನುಡಿದರು. ವಿಷಯತಜ್ಞರಾಗಿ ಆಗಮಿಸಿದ ಎನ್.ಎಸ.ಇ. ಯ ಮುಖ್ಯ ವ್ಯವಸ್ಥಾಪಕರಾದ ಶ್ರೀ.ರಂಗನಾಥನ್.ಎಸ್. ಅವರು ಬದುಕಿನ ವಾಣಿಜ್ಯ ವ್ಯವಹಾರವು ಮತ್ತು ಅದರ ಕಲಿಕೆಯು ಪ್ರಯೋಗಮೂಲವಾಗಿ ಅನುಭವಾದಾರಿತವಾಗಬೇಕಾಗಿದೆ, ಹಣಕಾಸು ವ್ಯವಹಾರವು ಎಲ್ಲ ಅಭಿವೃಧ್ಧಿಗೆ ಮೂಲ ಎಂದು ನುಡಿದರು.
ಗೌರವ ಅತಿಥಿಗಳಾಗಿ ಎಸ್.ಕೆ.ಇ. ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಎಸ್.ವಾಯ್.ಪ್ರಭು ಅವರು ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಆರ್.ಪಿ.ಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ.ಅನುಜಾ ನಾಯಿಕ ಅವರು ವಹಿಸಿದ್ದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿಗಳಾದ ಪ್ರೊ. ಸುಧೀರ ಶಿಂಧೆ ಅವರು, ಸಂಯೋಜಕರಾದ ಡಾ. ಸಚಿಂದ್ರ ಜಿ.ಆರ್. ಅವರು ಆಯೋಜಿಸಿದ ಎರಡು ದಿನದ ಈ ಕಾರ್ಯಕ್ರಮದಲ್ಲಿ ೨೦೦ಕ್ಕೂ ಹೆಚ್ಚಿನ ಸಂಖ್ಯೆಯ ಅಧ್ಯಾಪಕರು ಪಾಲ್ಗೊಂಡಿದ್ದರು. ಆರಂಭದಲ್ಲಿ ಕುಮಾರಿ. ಸೋನಾಲಿ ಪಾಟೀಲ ಪ್ರಾರ್ಥಿಸಿದರು, ಡಾ.ಸಚಿಂದ್ರ ಜಿ. ಆರ್. ಅವರು ಸ್ವಾಗತ ಕೋರಿದರು, ಪ್ರೊ. ಎಸ್.ಎಸ್.ಶಿಂಧೆ ಅವರು ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಮಯೂರಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಪ್ರೊ. ಪೂಜಾ ಪಾಟೀಲ ವಂದಿಸಿದರು.
ಕಾರ್ಯಾಗಾರವು ಇಂದು ಮತ್ತು ನಾಳೆ ವಿಷಯಾಧಾರಿತವಾಗಿ ವಿದ್ವಾಂಸರ ಪ್ರಬಂಧ ಮಂಡನೆ ಮತ್ತು ಚಿಂತನೆಗಳ ಮೂಲಕ ಮುಂದುವರೆಯಲಿದೆ.


Gadi Kannadiga

Leave a Reply