ಬೆಳಗಾವಿ: ಬಾಸ್ಕೇಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ 18 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಹಾಗೂ ವಿಕಲಚೇತನ ವ್ಹೀಲ್ಚೇರ್ ಬಾಸ್ಕೇಟಬಾಲ್ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏಪ್ರಿಲ್ 7 ರಿಂದ ಜಿಲ್ಲಾ ಕ್ರೀಡಾಂಗಣದ ಬಾಸ್ಕೇಟಬಾಲ್ ಅಂಕಣದಲ್ಲಿ ಉಚಿತ ಬಾಸ್ಕೇಟ್ಬಾಲ್ ಕ್ರೀಡಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿರುತ್ತದೆ. ಜಿಲ್ಲೆಯ ಬಾಸ್ಕೇಟ್ಬಾಲ್ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಬಾಸ್ಕೇಟ್ಬಾಲ್ ತರಬೇತಿದಾರರಾದ ವಿ.ಎಸ್.ಪಾಟೀಲ ಇವರ ದೂರವಾಣಿ ಸಂಖ್ಯೆ 8317456301ನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.