This is the title of the web page
This is the title of the web page

Please assign a menu to the primary menu location under menu

Local News

ಕೃಷಿ ಯಂತ್ರೋಪಕರಣಗಳ ಅನುದಾನಕ್ಕೆ ಕೇಂದ್ರಕ್ಕೆ ಮನವಿ; ಬಿ.ಸಿ.ಪಾಟೀಲ್


ಬೆಳಗಾವಿ ಸುವರ್ಣಸೌಧ,ಡಿ.೨೮: ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.
ವಿಧಾನ ಮಂಡಲದಲ್ಲಿ ಬುಧವಾರದ ಪ್ರಶ್ನೋತ್ತರ ವೇಳೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಟಿ.ಡಿ. ರಾಜೇಗೌಡ ಅವರು ಈಗಾಗಲೇ ಶೇ.೬೦ ರಿಂದ ೭೦ ರಷ್ಟು ರೈತರು ಕೃಷಿ ಚಟುವಟಿಕೆಗಳಿಂದ ದೂರವಾಗಿ ವಾಣಿಜ್ಯ ಬೆಳೆಗಳ ಕಡೆ ಮುಖ ಮಾಡುತಿದ್ದಾರೆ ಹಾಗಾಗಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಬೇಕೆಂದ ಪ್ರಶ್ನೆಗೆ ಉತ್ತರಿಸಿದ ಸಚಿವರು
ಕೃಷಿ ಯಂತ್ರೋಪಕರಣಗಳ ಖರೀದಿಗೆ ೪೦೬ ಕೋಟಿ ಖರ್ಚು ಮಾಡಲಾಗಿದ್ದು, ಕೇಂದ್ರ ಸರ್ಕಾರ ೮೩ ಕೋಟಿ ಹಾಗೂ ರಾಜ್ಯ ಸರ್ಕಾರ ೩೦ ಕೋಟಿ ರೂ. ಸೇರಿದಂತೆ ಒಟ್ಟು ೧೧೩ ಕೋಟಿ ರೂ. ಬಿಡುಗಡೆ ಮಾಡಿದೆ, ಈ ಅನುದಾನದಡಿ ಶೃಂಗೇರಿ ತಾಲೋಕಿಗೆ ೧೪ ಪವರ್ ಟಿಲ್ಲರ್ ನೀಡಲಾಗಿದೆ ಕೇಂದ್ರ ಸರ್ಕಾರದಿಂದ (ಎಸ್.ಎಮ್.ಎ.ಎಮ್ ) ಯೋಜನೆಯಡಿ,ರಾಜ್ಯಕ್ಕೆ ಮೊದಲ ಕಂತಿನಲ್ಲಿ ೩೫ ಟ್ರಾಕ್ಟರ್ ಹಾಗೂ ೧೨೨೫ ಪವರ್ ಟಿಲ್ಲರ್‌ಗೆ ಕೇಂದ್ರ ಸರ್ಕಾರದಿಂದ ಬಂದಿದ್ದು, ಎರಡನೇ ಕಂತಿನ ಕ್ರಿಯಾ ಯೋಜನೆಯ ಅನುಮೋದನೆ ಬಾಕಿಯಿದ್ದು ಎರಡನೇ ಕಂತಿನಲ್ಲಿ ಕೇಂದ್ರ ಸರ್ಕಾರವು ನೀಡುವ ಕ್ರಿಯಾ ಯೋಜನೆಯಂತೆ ಹೆಚ್ಚುವರಿ ಯಂತ್ರೋಪಕರಣ ನೀಡಲಾಗುವುದು ಎಂದರು.
ಕೃಷಿ ಕ್ಷೇತ್ರಕ್ಕೆ ೪೫ ಹೆಚ್.ಪಿ ಗಿಂತ ಹೆಚ್ಚಿನ ಸಾಮರ್ಥ್ಯದ ಟ್ರಾಕ್ರ‍್ಗಳ ನೀಡಿ ಎಂದು ಶಾಸಕ ಟಿ.ಡಿ.ರಾಜೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ಕ್ಷೇತ್ರಕ್ಕೆ ೪೫ ಹೆಚ್.ಪಿ ಗಿಂತ ಹೆಚ್ಚಿನ ಸಾಮರ್ಥ್ಯದ ಟ್ರಾಕ್ಟರ್ ಅವಶ್ಯಕತೆ ಇರುವುದಿಲ್ಲ ಎಂದ ಅವರು ಈ ಹಿಂದೆ ಇದ್ದ೨೫ ಹೆ.ಚ್.ಪಿ ಸಾಮರ್ಥ್ಯದ ಟ್ರಾಕ್ಟರನ್ನು ೪೫ ಹೆಚ್.ಪಿ. ಗೆ ಹೆಚ್ಚಿಸಲಾಗಿದೆ ಎಂದರು


Leave a Reply