ಬೆಳಗಾವಿ : ಗಡಿಭಾಗದಲ್ಲಿ ನ ಕನ್ನಡ ದಿನಪತ್ರಿಕೆಗಳ ಸ್ಥಿತಿಗತಿಗಳ ಕುರಿತು
ಚರ್ಚೆಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಫೆಬ್ರುವರಿ ತಿಂಗಳಲ್ಲಿ ಬೆಳಗಾವಿಯಲ್ಲಿ
ಹಮ್ಮಿಕೊಳ್ಳಲಾಗುವದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ
ಡಾ . ಸಿ ಸೋಮಶೇಖರ್ ಹೇಳಿದರು .
ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ೦ದು ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ
ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಮುರಗೇಶ ಶಿವಪೂಜಿ ಅವರೊಂದಿಗೆ ಮಾತನಾಡಿದ
ಅವರು ಗಡಿ ಭಾಗದಲ್ಲಿನ ಕನ್ನಡ ದಿನ ಪತ್ರಿಕೆಗಳ ಸಮಸ್ಯೆಗಳ ಮತ್ತು ಸ್ಥಿತಿಗತಿಗಳ
ಕುರಿತು ವಿಸ್ತೃತವಾದ ಚರ್ಚೆ ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ
ಬೆಳಗಾವಿಯಲ್ಲಿಯೇ 1ವ್ಯವಸ್ಥಿತವಾದ ಕಾರ್ಯಕ್ರಮವನ್ನು ಕರ್ನಾಟಕ ಗಡಿ ಪ್ರದೇಶ
ಅಭಿವೃದ್ಧಿ ಪ್ರಾಧಿಕಾರದಿಂದ ಫೆಬ್ರುವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವದು ಎಂದು
ಅವರು ವಿವರಿಸಿದರು .
ಗಡಿ ಭಾಗದ ಪ್ರತಿಯೊಂದು ಕನ್ನಡ ಶಾಲೆಗೆ ದಿನಪತ್ರಿಕೆಗಳನ್ನು ತರಿಸಿಕೊಳ್ಳುವ ಕುರಿತು
ಮತ್ತಿತರ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ವಿಶೇಷವಾಗಿ ಕನ್ನಡ
ದಿನಪತ್ರಿಕೆಗಳ ಅಭಿವೃದ್ಧಿ ಕುರಿತು ಪ್ರಾಧಿಕಾರವು ವಿಶೇಷ ಗಮನ ಹರಿಸಲಿದೆ ಎಂದು ಅವರು
ಭರವಸೆ ನೀಡಿದರು .ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ
ಅಧ್ಯಕ್ಷ ಮುಕ್ತಾರ್ ಪಠಾಣ ಮತ್ತು ಮಾಜಿ ಅಧ್ಯಕ್ಷ ಮೋಹನ್ ಪಾಟೀಲ ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಉಪಸ್ಥಿತರಿದ್ದರು .
Gadi Kannadiga > Local News > ಗಡಿ ಕನ್ನಡ ದಿನಪತ್ರಿಕೆಗಳ ಸ್ಥಿತಿಗತಿ ಕುರಿತ ಬೆಳಗಾವಿಯಲ್ಲಿ ಕಾರ್ಯಕ್ರಮ
More important news
ಮಗುವಿನ ಜೈವಿಕ ಪಾಲಕರು ಸಂಪರ್ಕಿಸಲು ಕೋರಿಕೆ
07/07/2022
ಆಗಷ್ಟ ೧೩ ರಂದು ಲೋಕ ಅದಾಲತ್
07/07/2022
‘ಹಾಸ್ಯ ರಸಾಯನ’ ಕಾರ್ಯಕ್ರಮ
06/07/2022