ಬೆಳಗಾವಿ: ಅಗ್ನಿಶಾಮಕ ಇಲಾಖೆಯು ಏಪ್ರಿಲ್ 14 ರಿಂದ 20ರವರೆಗೆ ಜಿಲ್ಲೆಯಲ್ಲಿ ‘ಅಗ್ನಿಶಾಮಕ ಸೇವಾ ಸಪ್ತಾಹ’ ಹಮ್ಮಿಕೊಂಡಿದೆ. ಹೀಗಾಗಿ ಸಾರ್ವಜನಿಕರು, ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಇತರೆ ವಿದ್ಯಾ ಸಂಸ್ಥೆಗಳಲ್ಲಿ ಅಗ್ನಿಶಮನದ ಕುರಿತಾಗಿ ಉಪನ್ಯಾಸ ಹಾಗೂ ಅಣುಕು ಪ್ರದರ್ಶನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಅಗ್ನಿಶಮನದ ಬಗ್ಗೆ ಉಪನ್ಯಾಸ, ಅಣಕುಕು ಪ್ರದರ್ಶನ ನೀಡುವ ಆಸಕ್ತರು ಬೆಳಗಾವಿ ಅಗ್ನಿಶಾಮಕ ಠಾಣೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.