This is the title of the web page
This is the title of the web page

Please assign a menu to the primary menu location under menu

State

ಬೆಳಗಾವಿ ವಿವಾದ : ತಕ್ಷಣ ಗಡಿ ಉಸ್ತುವಾರಿ ಸಚಿವರ ನೇಮಕಕ್ಕೆ ಒತ್ತಾಯ ಬೆಳಗಾವಿ ದಿನಪತ್ರಿಕೆಗಳ ಸಂಪಾದಕರ, ಸಾಹಿತಿಗಳ, ಕನ್ನಡ ಹೋರಾಟಗಾರರ ಸಭೆ ನಿರ್ಣಯ


ಬೆಳಗಾವಿ ಡಿ., ೦೭- ಕರ್ನಾಟಕ – ಮಹಾರಾಷ್ಟç ಗಡಿವಿವಾದಕ್ಕೆ ಸಂಭದಿಸಿದAತೆ ಕರ್ನಾಟಕ
ಸರಕಾರವು ತಕ್ಷಣ ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಬೇಕೆಂದು
ಒತ್ತಾಯಿಸುವ ನಿರ್ಣಯವನ್ನು ಇಂದಿಲ್ಲಿ ನಡೆದ ಬೆಳಗಾವಿ ದಿನಪತ್ರಿಕೆಗಳ
ಸಂಪಾದಕರ ಸಂಘದವತಿಯಿAದ ಏರ್ಪಡಿಸಲಾಗಿದ್ದ ಸಂಪಾದಕರ, ಕನ್ನಡ
ಸಾಹಿತಿಗಳ ಮತ್ತು ಕನ್ನಡ ಹೋರಾಟಗಾರರ ಸಭೆಯಲ್ಲಿ
ಕೈಗೊಳ್ಳಲಾಯಿತು.
ಗಡಿವಿವಾದಕ್ಕೆ ಸಂಭದಿಸಿದ ವಿಚಾರಗಳ ಕುರಿತು ಉಸ್ತುವಾರಿ ನೋಡಿಕೊಳ್ಳಲು
ಮತ್ತು ತತ್ಕಾಲಿನ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಮಹಾರಾಷ್ಟç
ಸರಕಾರ ಇಬ್ಬರು ಸಚಿವರನ್ನು ನೇಮಕ ಮಾಡಿ ತನ್ನ ಬದ್ಧತೆಯನ್ನು
ಮೆರೆದಿದೆ. ಆದರೆ ಕರ್ನಾಟಕ ಸರಕಾರ ಮಾತ್ರ ಈವರೆಗೆ ಕೈಕಟ್ಟಿ ಕುಳಿತು
ತನ್ನ ನಿರಾಸಕ್ತಿಯನ್ನು ಪ್ರದರ್ಶಿಸಿದೆ ಇದನ್ನು ಸಭೆಯು ಖಂಡಿಸಿದ್ದು ಮತ್ತು
ತಕ್ಷಣ ಗಡಿ ಉಸ್ತುವಾರಿಗಾಗಿಯೆ ಇಬ್ಬರು ಸಚಿವರನ್ನು ನೇಮಿಸಬೇಕು, ಸುಪ್ರೀಂ
ಕೋರ್ಟ ಮತ್ತು ಕೇಂದ್ರ ಸರ್ಕಾರದ ಎದುರು ಮಹಾರಾಷ್ಟçದ
ಮುಖವಾಡವನ್ನು ಬಯಲು ಮಾಡಬೇಕು ಎಂದು ಸಭೆಯು ಆಗ್ರಹಿಸಿತು.
ಗಡಿಭಾದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗುತ್ತಿದ್ದರೂ ಈ ಭಾಗದ, ಈ
ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಾಣ
ಮೌನವಹಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಗಡಿಭಾಗದ ಜನರ ವಿರೋಧ
ವ್ಯಕ್ತವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ತಮ್ಮ ಜವಾಬ್ದಾರಿಯನು
ನಿಭಾಯಿಸಬೇಕು ಎಂದು ಆಗ್ರಹಿಸಿತು.
ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ.
ಕರ್ನಾಟಕದ ಕನ್ನಡಿಗರಿಗೆ ಇರುವ ಎಲ್ಲ ರೀತಿಯ ಸೌಲಭ್ಯಗಳು ಮರಾಠಿ
ಭಾಷಿಕರಿಗೂ ಇವೆ. ಈ ವಿಚಾರದಲ್ಲಿ ಬೇಧಭಾವವಾಗಿಲ್ಲ. ಅದು ಮರಾಠಿ
ಶಾಲೆಗಳಾಗಿರಬಹುದು ಅಥವಾ ಮೂಲ ಸೌಕರ್ಯವಾಗಿರಬಹುದು. ಸಾಲದಕ್ಕೆ
ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಮರಾಠಿ ಅಭಿವೃದ್ದಿ ನಿಗಮ ಸ್ಥಾಪಿಸಿ ವಿಶೇಷ
ಅನುದಾನವನ್ನು ಸಹ ಸರಕಾರ ನೀಡಿದೆ, ಹೀಗಿರುವಲ್ಲಿ ಮರಾಠಿ ಭಾಷಿಕರಿಗೆ
ಅನ್ಯಾಯವಾಗಿದೆ ಎಂದು ದೂರುವ ಮಹಾರಾಷ್ಟçದ ಕೆಲ ನಾಯಕರು ವಾಸ್ತವ
ಪರಿಸ್ಥಿಯನ್ನು ಅರಿತು ಮಾತನಾಡಬೇಕು. ಅನಗತ್ಯವಾಗಿ ಪ್ರಚೋದನಾತ್ಮಕ
ಹೇಳಿಕೆ ನೀಡಿ ಇಲ್ಲಿನ ಸಾಮರಸ್ಯ ವಾತಾವರಣವನ್ನು ಹಾಳು ಮಾಡಬಾರದು,
ಅಷ್ಟಕ್ಕೂ ಬೆಳಗಾವಿ ಮರಾಠಿಗರಿಗಾಗಿ ಮಹಾರಾಷ್ಟç ಮಾಡಿದ್ದಾರೂ ಎನು? ಕೆವಲ
ರಾಜಕೀಯ ಬೆಳೆ ಬೆಯಿಸಿಕೊಳ್ಳಲು ತಪ್ಪು ಹೇಳಿಕೆ ನೀಡಿ ಸಮಾಜವನ್ನು ದಾರಿ
ತಪ್ಪಿಸುತ್ತಿದ್ದಾರೆ, ಇದೆ ರೀತಿಯ ಸೌಕರ್ಯ ಮತ್ತು ಸೌಲಭ್ಯಗಳು
ಮಹಾರಾಷ್ಟçದಲ್ಲಿನ ಕನ್ನಡಿಗರೇ ಹೆಚ್ಚಿರುವ ಪ್ರದೇಶಗಳಲ್ಲಿ ಇಲ್ಲ
ಎನ್ನುವದನ್ನು ಅಲ್ಲಿನ ಜನರು ಹೇಳುತ್ತಿದ್ದಾರೆ ಅ ಅನ್ಯಾಯವನ್ನು ಮೊದಲು
ಅವರು ಸರಿಪಡಿಸಲಿ ಎಂದು ಸಭೆ ಅಸಮಧಾನವ್ಯಕ್ತಪಡಿಸಿತು.

ಕನ್ನಡತಿ ಕೆಳದಿ ಚನ್ನಮ್ಮ ಕಷ್ಟಕಾಲದಲ್ಲಿ ಶಿವಾಜಿಯ ಮಗನಿಗೆ ಆಶ್ರಯ
ನೀಡಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ಕಿತ್ತೂರು ಚನ್ನಮ, ಬೆಳವಡಿ
ಮಲ್ಲಮ್ಮ, ಛತ್ರಪತಿ ಶಿವಾಜಿ ಇವರುಗಳ ಕಾಲದಿಂದಲೂ ಕನ್ನಡ ಮತ್ತು
ಮರಾಠಿ ಭಾಷಿಕರ ಬಾಂಧವ್ಯ ಮತ್ತು ಸಾಮರಸ್ಯ ಜೀವನ ಅತ್ಯುತ್ತಮವಾಗಿ ಇದೆ.
ಅದನ್ನು ಹಾಳುಮಾಡವ ಕೆಲಸವಾಗಬಾರದು. ಇದರಿಂದಾಗಿ ಈ ಭಾಗದ ಅಭಿವೃದ್ಧಿ
ಕುಂಠಿತವಾಗುತ್ತಿದೆ. ಸಾಮಾನ್ಯ ಜನರ ಜೀವನ ಪದೆ ಪದೆ
ಅಸ್ತವ್ಯಸ್ತವಾಗುತ್ತಿದೆ. ಮಹಾರಾಷ್ಟçದ ನಾಯಕರ ಪ್ರಚೋದನಾತ್ಮಕ
ಹೇಳಿಕೆ ನೀಡಿದಾಗ ಅನಿವಾರ್ಯವಾಗಿ ಅದಕ್ಕೆ ನಾವು ಉತ್ತರ ನೀಡಲೇ
ಬೇಕಾಗುತ್ತದೆ. ಆಗ ಸಹಜವಾಗಿಯೇ ಘರ್ಷಣೆ ಆರಂಭವಾಗುತ್ತದೆ. ಈ
ವಿವಾದಕ್ಕೆ ಶಾಶ್ವತ ಪರಿಹಾರನ್ನು ಎರಡು ರಾಜ್ಯಗಳ ಮುಖ್ಯಮಂತ್ರಿಗಳು
ಕೈಗೊಳ್ಳಬೇಕು. ಕರ್ನಾಟಕದಲ್ಲಿನ ಮರಾಠಿಗರಿಗೆ ನೀಡಲಾಗುತ್ತಿರುವ ಸಕಲ
ಸೌಕರ್ಯ ಸೌಲಭ್ಯಗಳು ಮಹಾರಾಷ್ಟçದಲ್ಲಿನ ಎಲ್ಲ ಕನ್ನಡಿಗರಿಗೆ
ಸಿಗುವಂತಾಗಲಿ ಈ ನಿಟ್ಟಿನಲ್ಲಿ ರಾಜ್ಯ ಸರಕಾರ ತನ್ನ ಇಚ್ಛಾಶಕ್ತಿಯನ್ನು
ಪ್ರದರ್ಶಿಸಬೇಕಿದೆ ಎಂದು ಸಭೆ ಆಗ್ರಹಿಸಿತು.

ವಾಸ್ತವಿಕವಾಗಿ ಒಂದಿAಚು ಭೂಮಿ ಇಲ್ಲಿಂದ ಅಲ್ಲಿಗಾಗಲಿ, ಅಲ್ಲಿಂದ ಇಲ್ಲಿಗಾಗಲಿ
ಹೋಗುವುದು ಸಾಧ್ಯವಿಲ್ಲದ ಮಾತು. ಕೇವಲ ರಾಜಕಾರಣಕ್ಕಾಗಿ ಇದೆಲ್ಲ
ನಡೆದಿದ್ದು ಯಾವುದೇ ಕಾರಣಕ್ಕು ಗಡಿ ಭಾಗದಲ್ಲಿ ಶಾಂತಿ ಕಾಪಾಡಬೇಕು
ಸಾಮರಸ್ಯ ಜೀವನಕ್ಕೆ ದಕ್ಕೆಯಾಗಬಾರದು. ಈ ನಿಟ್ಟಿನಲ್ಲಿ ಸರಕಾರ ದಿಟ್ಟ
ನಿಲುವನ್ನು ಮತ್ತು ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು
ಎಂದು ಸಭೆಯು ಅಭಿಪ್ರಾಯಪಟ್ಟಿತು.
ಸಂಪಾದಕ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಅಧ್ಯಕ್ಷತೆಯಲ್ಲಿ
ನಡೆದ ಸಭೆಯಲ್ಲಿ ಸಾಹಿತಿಗಳಾದ ಬಿ.ಎಸ್.ಗವಿಮಠ, ಎಂ.ಎಸ್.ಇAಚಲ, ಶ್ರೀಮತಿ
ನಿಲಗಂಗಾ ಚರಂತಿಮಠ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಕನ್ನಡ
ಹೋರಾಟಗಾರರಾದ ಮಹಾಂತೇಶ ರಣಗಟ್ಟಿಮಠ, ಮಹಾದೇವ ತಳವಾರ,
ಪದ್ಮರಾಜ ವೈಜನ್ನವರ, ಶೀಮತಿ ಕಸ್ತೂರಿ ಬಾವಿ, ಸಂಪಾದಕರುಗಳಾದ
ಸAಪತ್ತಕುಮಾರ ಮುಚಳಂಬಿ, ಕುಂತಿನಾಥ ಕಲಮನಿ, ಸತೀಶ
ಗುಡಗನಟ್ಟಿ ಮಾತನಾಡಿದರು. ಸಭೆಯಲ್ಲಿ ಸಂಪಾದಕರುಗಳಾದ
ಎಸ್.ಬಿ.ಧಾರವಾಡಕರ, ಎ.ಬಿಧಾರವಾಡಕರ, ಶಿವರಾಯ ಏಳುಕೋಟಿ, ಹಿರೋಜಿ
ಮಾವರಕರ, ಜಕಿಅಹಮ್ಮದ ಧಾರವಾಡಕರ, ಮಲ್ಲಿಕಾರ್ಜುನ ಹೆಗ್ಗನಾಯಿಕ,
ಶ್ರೀನಿವಾಸ ಮಾವರಕರ, ಕನ್ನಡ ಹೋರಾಟಗಾರ ಮನೋಹರ
ಪಾಯಕ್ಕನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Leave a Reply