ಬೆಳಗಾವಿ ೮- ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ ಅಧಿಕಾರಗ್ರಹಣ ಸಮಾರಂಭ ಇದೇ ಅಗಸ್ಟ್ ೨೭ ರವಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಬೆ. ೧೦.೩೦ ಕ್ಕೆ ನಡೆಯಲಿದ್ದು ಹಿರಿಯ ಕವಿ ಶ್ರೀ ಜಿನದತ್ತ ದೇಸಾಯಿ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಶ್ರೀ ಎಲ್. ಎಸ್. ಶಾಸ್ತ್ರಿ ಅಧ್ಯಕ್ಷತೆ ವಹಿಸುವರು.
ಅದೇದಿನ ಜಿಲ್ಲಾ ಮಟ್ಟದ ಚುಟುಕು ವಾಚನ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಖ್ಯಾತ ಅರಿವಳಿಕೆ ತಜ್ಞರು ಮತ್ತು ಗಜಲ್ ಕವಿ ಡಾ. ಗೋವಿಂದ ಹೆಗಡೆ ಹುಬ್ಬಳ್ಳಿ ಅವರು ಸಮಾರೋಪ ಉಪನ್ಯಾಸ ನೀಡಲಿದ್ದಾರೆ ಮತ್ತು ಜಿಲ್ಲಾ ಚುಸಾಪ ಕಾರ್ಯಾಧ್ಯಕ್ಷ ಡಾ. ಸಿ. ಕೆ. ಜೋರಾಪುರ ಅಧ್ಯಕ್ಷತೆ ವಹಿಸಲಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಬೆಳಗಾವಿ ಜಿಲ್ಲಾ ಚುಸಾಪ ನೂತನ ಮಂಡಳಿ ಅಧಿಕಾರಗ್ರಹಣ ಸಮಾರಂಭ ದಿ. ೨೭ ರಂದು
ಬೆಳಗಾವಿ ಜಿಲ್ಲಾ ಚುಸಾಪ ನೂತನ ಮಂಡಳಿ ಅಧಿಕಾರಗ್ರಹಣ ಸಮಾರಂಭ ದಿ. ೨೭ ರಂದು
Murugesh08/08/2023
posted on