ಬೆಳಗಾವಿ: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಕರೆತರಲಾಗಿದ್ದ ಆರೋಪಿಯೊಬ್ಬರು ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟ ಘಟನೆ ತಡರಾತ್ರಿ ನಡೆದಿದೆ.
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಬಸನಗೌಡ ಈರನಗೌಡ ಪಾಟೀಲ(45) ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾನೆ.
ಗಾಂಜಾ ಪ್ರಕರಣದ ವಿಚಾರಣೆಗೆ ಈತನನ್ನು ಬೆಳಗಾವಿಗೆ ಕರೆತರುವಾಗ ಕಾಕತಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದೆವು. ಚೇತರಿಸಿಕೊಂಡ ನಂತರ, ಬೆಳಗಾವಿ ಗ್ರಾಮೀಣ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದೆವು.