This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ-ಮಣುಗೂರ ಎಕ್ಸ್ಪ್ರೆಸ್ ರೈಲು ಜ.೧೭ರಿಂದ ಪ್ರಾರಂಭ :ಈರಣ್ಣ ಕಡಾಡಿ


ಮೂಡಲಗಿ: ಬೆಳಗಾವಿ-ಮಣುಗೂರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು (೦೭೩೩೫/೦೭೩೩೬) ಸೇವೆಯನ್ನು ಜ.೧೭ ಮಂಗಳವಾರ ಬೆಳಗಾವಿಯಿಂದ ರೈಲು ಸಂಚಾರ ಪ್ರಾರಂಭವಾಲಿದೆ ಎಂದು ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಗುರುವಾರ ಜ.೧೨ ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ರಾಜ್ಯಸಭೆಯ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿಯಿಂದ ಹೈದರಾಬಾದ್ ಮುಂಬೈನಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸಲು ರೈಲು ಸೇವೆಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಲಾಗಿತ್ತು. ನನ್ನ ಮನವಿಗೆ ಸಕಾರಾತ್ಮವಾಗಿ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರೆÀ ಹಾಗೂ ರೈಲ್ವೆ ಇಲಾಖೆಗೆ ಅಭಿನಂದನೆÀಗಳನ್ನು ತಿಳಿಸಿದರು.
ಬೆಳಗಾವಿ-ಮಣುಗೂರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಜ. ೧೭ ರಿಂದ ಮಾ. ೩೦ ರವರೆಗೆ ಬೆಳಗಾವಿಯಿಂದ ಮಧ್ಯಾಹ್ನ ೧.೧೦ಕ್ಕೆ ಹೊರಡುವ ಈ ರೈಲು ಮರುದಿನ ಮಧ್ಯಾಹ್ನ ೧೨.೫೦ಕ್ಕೆ ಮಣುಗೂರ ತಲುಪುವುದು. ಜ.೧೮ ರಿಂದ ಮಣುಗೂರನಿಂದ ಮಧ್ಯಾಹ್ನ ೩.೪೦ಕ್ಕೆ ಹೊರಡುವ ರೈಲು ಮರುದಿನ ಮಧ್ಯಾಹ್ನ ೩.೫೫ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ಖಾನಾಪೂರ, ಲೋಂಡಾ, ಅಳ್ಳಾವರ, ಧಾರವಾಡ, ಹುಬ್ಬಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ದರೋಜಿ, ಬಳ್ಳಾರಿ, ಗುಂತಕಲ್ ಮಂತ್ರಾಲಯ ರೋಡ, ರಾಯಚೂರ, ಯಾದಗಿರಿ, ಚಿತ್ತಾಪುರ, ಲಿಂಗಂಪಲ್ಲಿ, ಸಿಕಂದರಾಬಾದ, ವಾರಂಗಲ್ಲ, ಭದ್ರಾಚಲಂ ರೋಡ ಮಾರ್ಗವಾ ಸಂಚರಿಸಲಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದ್ದು ಇನ್ನಷ್ಟು ವ್ಯಾಪಾರ ವಹಿವಾಟು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಸದ ಈರಣ್ಣ ಕಡಾಡಿ ವಿನಂತಿಸಿದರು.


Gadi Kannadiga

Leave a Reply