ಬೆಳಗಾವಿ: ಸಾರಾಯಿ ತರಲು ಕೊಟ್ಟ ಹಣದಲ್ಲಿ ಚಿಲ್ಲರೆ ಹಣ ವಾಪಸ್ ಕೊಡಲಿಲ್ಲವೆಂದು ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ವೈಭವ ನಗರದ ಸತ್ಯಸಾಯಿ ಕಾಲೋನಿಯಲ್ಲಿ ನಡೆದಿದೆ.
ಮಹ್ಮದ್ ದಿಲಾಪುಕಾರ ಶೇಖ್ (27 ) ಕೊಲೆಯಾದ ದುರ್ದೈವಿ. ಅದೇ ಕಾಲೋನಿಯ ನಿವಾಸಿ ಉಸ್ಮಾನ ಶೇಖ್ ಎಂಬಾತನೇ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.
ಉಸ್ಮಾನ್ ಎಂಬಾತ ಮಹ್ಮದ್ ನಿಗೆ 500 ರೂ.ಹಣ ಕೊಟ್ಟು ಸಾರಾಯಿ ತೆಗದುಕೊಂಡು ಬರುವಂತೆ ಹೇಳಿದ್ದಾನೆ. ಆಗ ಮಹ್ಮದ್ 250 ರೂ.ಕೊಟ್ಟು ಸಾರಾಯಿ ತಂದಿದ್ದಾನೆ. ಉಳಿದ 250 ರೂ. ಚಿಲ್ಲರೆ ಹಣವನ್ನು ಉಸ್ಮಾನನಿಗೆ ಹಿಂದಿರುಗಿಸಿಲಿಲ್ಲ ಆಗ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳವಾಗಿದೆ. ಕೋಪಗೊಂಡ ಉಸ್ಮಾನ್ ಬಿಯರ್ ಬಾಟಲಿಯಿಂದ ಮಹ್ಮದನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.