ಬೆಳಗಾವಿ, ಜು.೦೩ : ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಜಾತಿ, ಧರ್ಮ ಎಂಬ ಬೇದ ಭಾವ ತೆಗೆದುಹಾಕಲು ಹಾಗೂ ಸಮಾಜದಲ್ಲಿರುವ ಕೆಲವು ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆಗೆ ನಿರಂತರ ಶ್ರಮಿಸಿದ ಮಹಾನ್ ವಚನಕಾರ ಎಂದು ಬೆಳಗಾವಿ ಉಪ ವಿಭಾಗಾಧಿಕಾರಿ ಬಲರಾಮ ಚವ್ಹಾಣ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೋಮವಾರ (ಜು.೦೩) ನಡೆದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರ ಜಯಂತಿಗಳ ಆವರಣೆ ಮಾಡುವುದರ ಜೊತೆಗೆ ಅವರ ಜೀವನ ಶೈಲಿ, ಆದರ್ಶ, ವಿಚಾರ, ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ತಿಳಿದುಕೊಂಡಾಗ ಮಾತ್ರ ಶರಣರ ಜಯಂತಿಗಳು ಆಚರಣೆಗೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ಬಲರಾಮ ಚವ್ಹಾಣ್ ಅವರು ಹೇಳಿದರು.
ಸಮಾಜದಲ್ಲಿ ಸಮಾನತೆಯ ಕನಸನ್ನು ಹೊಂದಿದ ಹಡಪದ ಅಪ್ಪಣ್ಣ ಅವರು ಕೆಳಮಟ್ಟದ ಜನರು ಕೂಡಾ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದು ಒಳ್ಳೆಯ ಸ್ಥಾನ ಮಾನಗಳು ಗಳಿಸಬೇಕು ಅವರಿಗೂ ಕೂಡಾ ಸಮಾಜದಲ್ಲಿ ಉತ್ತಮ ಬದುಕು ಬಾಳಲು ಅವಕಾಶಗಳು ಸಿಗಬೇಕು ಎಂಬ ಆಶೆಯನ್ನು ಹೊಂದಿದ್ದರು ಎಂದು ಸಾಹಿತಿಗಳಾದ ಪ್ರೇಮಕ್ಕಾ ಅಂಗಡಿ ಅವರು ಉಪನ್ಯಾಸ ನೀಡಿದರು.
ಶ್ರೀ ಶರಣ ಹಡಪದ ಅಪ್ಪಣ್ಣ ಅವರು ಯಾವುದೇ ಜಾತಿ ಧರ್ಮಕ್ಕೇ ಸೀಮಿತವಾಗಿರದೆ ವಚನಗಳ ಮೂಲಕ ಎಲ್ಲರಲ್ಲಿಯೂ ಪ್ರೀತಿ ವಿಶ್ವಾಸ ಪರಸ್ಪರ ಸಂಬಂಧಗಳ ಬೀಜಗಳನ್ನು ಬಿತ್ತಿ ಮೇಲೂ, ಕೀಳು, ಲಿಂಗ ಜಾತಿ ಧರ್ಮ ಎನ್ನದೇ ಎಲ್ಲರೂ ಒಂದೇ ಎಂಬ ಸಮಾನತೆಯ ಮನೋಬಾವ ಹೊಂದಿದವರು ಶ್ರೀ ಶರಣ ಹಡಪದ ಅಪ್ಪಣ್ಣವರು ಎಂದು ನೀಡಿದರು.
ಇನ್ನೊಬ್ಬರ ಮನಸ್ಸು ನೋಯಿಸದೆ, ಹಿಂಸಿಸದೆ ತನು, ಮನ, ಧನವನ್ನು ಉತ್ತಮವಾಗಿ ಮೈಗೂಡಿಸಿಕೊಳ್ಳಬೇಕು ಎಂದು ವಚನಗಳ ಮೂಲಕ ಎಲ್ಲರನ್ನೂ ಜಾಗೃತ ಗೊಳಿಸಿದರು ಶ್ರೀ ಶರಣ ಹಡಪದ ಅಪ್ಪಣ್ಣವರು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಶರಣರ ಜಯಂತಿಯಲ್ಲಿ ಭಾಗವಹಿಸುವ ಎಲ್ಲ ಸಮಾಜದ ಜನರು ಬಿಂದೆಗೆಗಳನ್ನು ಹೊತ್ತು ಬರುವ ಬದಲು ಶರಣರ ತತ್ವ ಸಿದ್ಧಾಂತ ವಚನಗಳನ್ನು ತಿಳಿದು ವಚನ ಪುಸ್ತಕ ಗಳನ್ನು ಹೊತ್ತು ಬರಬೇಕು ಎಂದು ಪ್ರೇಮಕ್ಕಾ ಅಂಗಡಿ ಅವರು ಅಭಿಪ್ರಾಯಪಟ್ಟರು.
ನಗರ ಸೇವಕಿ ವೀಣಾ ಬಿಜಾಪುರೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಬಸವರಾಜ ರೊಟ್ಟಿ , ಸುರೇಶ ಹಡಪದ, ಮಹಾಂತೇಶ ಹಡಪದ ಸೇರಿದಂತೆ ಮತ್ತಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ಮೆರವಣಿಗೆ ಕಾರ್ಯಕ್ರಮ:
ಇದಕ್ಕೂ ಮುನ್ನ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಭಾವಚಿತ್ರ ಮೆರವಣಿಗೆ ಕೋಟೆ ಕೆರೆಯ ಅಶೋಕ ವೃತ್ತದಿಂದ ಪ್ರಾರಂಭವಾಗಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಸಂಚರಿಸಿ ನಗರದ ಕುಮಾರ ಗಂಧರ್ವ ಕಲಾ ಮಂದಿರದ ವರೆಗೂ ತಲುಪಿತು.
ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಬೆಳಗಾವಿ ಉಪ ವಿಭಾಗಾಧಿಕಾರಿಗಳಾದ ಬಲರಾಮ ಚವ್ಹಾಣ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ನಗರ ಸೇವಕಿ ವೀಣಾ ಬಿಜಾಪುರೆ ಬಸವರಾಜ ರೊಟ್ಟಿ , ಸುರೇಶ ಹಡಪದ, ಮಹಾಂತೇಶ ಹಡಪದ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.
Gadi Kannadiga > Local News > ಬೆಳಗಾವಿ ಬೆಳಗಾವಿಯಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಶ್ರೀ ಶಿವಶರಣ ಹಡಪದ ಅಪ್ಪಣ್ಣರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಿ : ಬಲರಾಮ ಚವ್ಹಾಣ
ಬೆಳಗಾವಿ ಬೆಳಗಾವಿಯಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಶ್ರೀ ಶಿವಶರಣ ಹಡಪದ ಅಪ್ಪಣ್ಣರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಿ : ಬಲರಾಮ ಚವ್ಹಾಣ
Suresh03/07/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023