This is the title of the web page
This is the title of the web page

Please assign a menu to the primary menu location under menu

Local News

ಪತಿಯ ಯೋಗಕ್ಷೇಮಕ್ಕಾಗಿ ಅದ್ದೂರಿಯಾಗಿ ವಟಸಾವಿತ್ರಿ ವೃತ ಆಚರಿಸಿದ ಬೆಳಗಾವಿ ಸುಮಂಗಲೆಯರು


ಬೆಳಗಾವಿ:ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ, ಹನುಮ ಗಣೇಶ ದೇವಸ್ಥಾನದಲ್ಲಿ ಅಶ್ವತ್ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ನೂರಾರು ಸುಮಂಗಲಿಯರು ವಟಸಾವಿತ್ರಿಯ ವೃತವನ್ನು ಆಚರಣೆ ಮಾಡಿದರು.

ಹಿಂದಿನ ಕಾಲದಲ್ಲಿ ಆಧ್ಯಾತ್ಮ ವಿಚಾರವುಳ್ಳ, ದಾರ್ಶನಿಕಳಾದ ಸಾವಿತ್ರಿಯು ತನ್ನ ಗಂಡ ಸತ್ಯವಾನ, ಮರ ಕಡಿಯುವ ವೇಳೆ ಮರಣಹೊಂದಿದಾಗ ಯಮನೊಂದಿಗೆ ವಾದಮಾಡಿ, ವರಪಡೆದು ತನ್ನ ಗಂಡನ ಪ್ರಾಣವನ್ನು ಮತ್ತೆ ಪಡೆದಳು ಎಂಬ ಪ್ರತೀತಿ ಇದೆ.

ಅದೇ ಆದರ್ಶವನ್ನು ಪಾಲಿಸುತ್ತಾ ಈಗಿನ ಧರ್ಮಪತ್ನಿಯರು ತಮ್ಮ ಗಂಡನ ಆರೋಗ್ಯ, ಆಯುಷ್ಯ, ಚೆನ್ನಾಗಿದ್ದು, ತಮ್ಮ ಸೌಭಾಗ್ಯ ಯಾವತ್ತೂ ಹೀಗೆ ಇರಲಿ ಎಂದು, ಈ ವಟಸಾವಿತ್ರಿಯ ವೃತವನ್ನು ಆಚರಿಸುತ್ತೇವೆ ಎಂದರು.

ಅಶ್ವತ್ ಮರಕ್ಕೆ ಏಳು ಸುತ್ತು ದಾರ ಸುತ್ತುವದಕ್ಕೆ ಕಾರಣ ಹೇಳಿದ ಸುಮಂಗಲಿಯರು ಏಳೇಳು ಜನ್ಮಕೂ ಇವರೇ ನಮ್ಮ ಪತಿಯಾಗಿ ಬರಬೇಕು ಎಂದು ನನ್ನವರನ್ನು ಮನದಲ್ಲಿ ನೆನೆಯುತ್ತಾ ಏಳು ಸುತ್ತು ದಾರ ಸುತ್ತುತ್ತವೆ ಎಂದರು.

ಪ್ರತಿ ವರ್ಷ ಕಾರ್ ಹುಣ್ಣಿಮೆಯಂದು ಈ ವೃತ ಆಚರಣೆ ಮಾಡುತ್ತಿದ್ದು, ಎಲಿ ಅಡಕೆ, ಐದು ವಿಧವಾದ ಹಣ್ಣುಗಳನ್ನು ತಂದು ಐದು ಮುತೈದೆಯರಿಗೆ ಉಡಿತುಂಬುವ ಪದ್ಧತಿಯೂ ಈ ವೃತದಲ್ಲಿದೆ ಎಂದರು.

ಬೆಳಗಾವಿ ನಗರದಲ್ಲಿ ವಿಭಿನ್ನ ಸಂಸ್ಕೃತಿಗಳು ಮಿಲನವಾಗಿ ಇಂತಹ ವಿಶಿಷ್ಟ ವೃತಗಳು ಜರುಗಿ, ನೂರಾರು ಮಹಿಳೆಯರು ಖುಷಿಯಿಂದ ಬಾಗಿಯಾಗಿ ಆಚರಣೆ ಮಾಡುವುದರಿಂದ ನಮ್ಮ ಸಂಸ್ಕೃತಿಗೊಂದು ಮೆರಗು ಇದ್ದಂತೆ.


Gadi Kannadiga

Leave a Reply