This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಕ್ರೀಡಾಳುಗಳಿಗೆ ಸೂಚನೆ


ಬೆಳಗಾವಿ, ಆ.೨೬ : ೨೦೨೨-೨೩ನೇ ಸಾಲಿನ ಬೆಳಗಾವಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ದಿನಾಂಕ ೨ನೇ ಸೆಪ್ಟೆಂಬರ ೨೦೨೨ ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿಸಲು ನಿರ್ಧರಿಸಲಾಗಿದೆ. ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆಪ್ಟೆಂಬರ್ ೦೨, ೨೦೨೨ ಬೆಳಿಗ್ಗೆ ೯ ಗಂಟೆಗೆ ಹಾಜರಿದ್ದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದು.
ಸ್ಪರ್ಧೆಗಳ ವಿವರ :
ಅಥ್ಲೆಟಿಕ್ಸ್ (ಪುರುಷರಿಗಾಗಿ): ೧೦೦ಮೀ, ೨೦೦ಮೀ, ೪೦೦ಮೀ, ೮೦೦ಮೀ, ೧೫೦೦ಮೀ, ೫೦೦೦ಮೀ, ಉದ್ದಜಿಗಿತ, ಎತ್ತರಜಿಗಿತ, ಗುಂಡುಎಸೆತ, ಟ್ರಿಪಲ್‌ಜಂಪ್, ಜಾವಲಿನ್ ಥ್ರೋ, ಡಿಸ್ಕಸ್‌ಥ್ರೋ, ೧೧೦ಮೀ ಹರ್ಡಲ್ಸ್, ೪x೧೦೦ಮೀ ರಿಲೇ, ೪x೪೦೦ಮೀ ರಿಲೇ.
ಅಥ್ಲೆಟಿಕ್ಸ್ (ಮಹಿಳೆಯರಿಗಾಗಿ): ೧೦೦ಮೀ, ೨೦೦ಮೀ, ೪೦೦ಮೀ, ೮೦೦ಮೀ, ೧೫೦೦ಮೀ, ೩೦೦೦ಮೀ, ಉದ್ದಜಿಗಿತ, ಎತ್ತರಜಿಗಿತ, ಗುಂಡುಎಸೆತ, ಟ್ರಿಪಲ್‌ಜಂಪ್, ಜಾವಲಿನ್ ಥ್ರೋ, ಡಿಸ್ಕಸ್‌ಥ್ರೋ, ೧೦೦ ಮೀ ಹರ್ಡಲ್ಸ್, ೪x೧೦೦ಮೀ ರಿಲೇ, ೪x೪೦೦ಮೀ ರಿಲೇ,
ಗುಂಪು ಆಟಗಳು : ವಾಲಿಬಾಲ್, ಫುಟಬಾಲ್, ಖೋಖೋ, ಕಬಡ್ಡಿ, ಥ್ರೋಬಾಲ್ (ಪುರುಷ ಮತ್ತು ಮಹಿಳೆಯರಿಗಾಗಿ)
ನಿಯಮಗಳು:
ದಸರಾಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಬೆಳಗಾವಿ ತಾಲೂಕಿನ ರಹವಾಸಿಯಾಗಿರಬೇಕು. ಕ್ರೀಡಾಕೂಟದಲ್ಲಿರಕ್ಷಣಾ ಪಡೆ, ಅರೆರಕ್ಷಣಾಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಾಗಿರುವುದಿಲ್ಲ. ಈ ಕ್ರೀಡಾಕೂಟದಲ್ಲಿತಾಲೂಕಿನ ಶಾಲಾ ಕಾಲೇಜು, ಯುವಕ/ತಿ ಸಂಘಗಳ ಹಾಗೂ ಕ್ರೀಡಾ ಸಂಘ ಸಂಸ್ಥೆಗಳ ಕ್ರೀಡಾಪಟುಗಳು ಭಾಗವಹಿಸಬಹುದು. ಒಂದುತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತೊಂದುತಾಲೂಕಿನಲ್ಲಿ ಭಾಗವಹಿಸತಕ್ಕದ್ದಲ್ಲ. ನಿರ್ಣಾಯಕರ ನಿರ್ಣಯವೇಅಂತಿಮವಾಗಿದ್ದು ಕ್ರೀಡಾಕೂಟದಲ್ಲಿ ಅಸಭ್ಯವಾಗಿ ವರ್ತಿಸಿದ ಕ್ರೀಡಾಪಟುಅಥವಾ ತಂಡಗಳನ್ನು ಅನರ್ಹಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೩೧-೨೯೫೦೩೦೬ ನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply