ಬೆಂಗಳೂರು : ಅಕ್ಟೋಬರ್ 14 ರಿಂದ 16 ವರೆಗೆ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಬೆಳಗಾವಿಯ ಬಾಕ್ಸರ್ ಗಳು ಕಂಚಿನ ಪದಕಗಳನ್ನು ಗೆದ್ದು ಮಿಂಚಿದ್ದಾರೆ.
ಕರ್ನಾಟಕ ಅಮೆಚರ್ ಬಾಕ್ಸಿಂಗ್ ಅಸೋಸಿಯೇಷನ್ ಅಕ್ಟೋಬರ್ 14 ರಿಂದ 16 ವರೆಗೆ ಚಾಂಪಿಯನಷಿಪ ವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದರು.
ಪುರುಷರ ವಿಭಾಗದಲ್ಲಿ ಚಿಕ್ಕೋಡಿ, ಹಿರೇಕೋಡಿಯ ರಾದ ಮಂಜುನಾಥ ಸದಾಶಿವ ಪೋಳ ಅವರು ಕಂಚಿನ ಪದಕ ಗೆದ್ದರೇ, ಮಹಿಳಾ ಯೂಥ್ ವಿಭಾಗದಲ್ಲಿ ಬೆಳಗಾವಿಯ ಶ್ರೀಷ್ಟಿ ನಾಗಪ್ಪ ಚನ್ನಬಸಪ್ಪಗೋಳ ಹಾಗೂ ಮಹಿಳಾ ವರ್ಗ ದಲ್ಲಿ , ಅಕ್ಕಮ್ಮ ಪಿ ಸವಣೂರ ಸೋನಿಯಾ ಪರಶುರಾಮ ಧೂಡುಮ, ಪೂಜಾ ಸುರೇಶ್ ಕೋಳೆಕರ ಕ್ರಮವಾಗಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಇವರೆಲ್ಲರೂ ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಿದ್ದು, ಎಲ್ಲರೂ ಬೆಳಗಾವಿಯ ಯುನೈಟೆಡ್ ಸ್ಪೋರ್ಟ್ಸ್ & ಫಿಟ್ನೆಸ್ ಅಕಾಡೆಮಿಯಲ್ಲಿ ತರಬೇತುದಾರರಾದ ವಿಶ್ವನಾಥ್ ಚರಂಟೀಮಠ ಮತ್ತು ಪುಂಡಲೀಕ ಖಜಗೋನಟ್ಟಿ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಬೆಳಗಾವಿಯ ಯುನೈಟೆಡ್ ಸ್ಪೋರ್ಟ್ಸ್ & ಫಿಟ್ನೆಸ್ ಅಕಾಡೆಮಿ ಅವರು ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಒಟ್ಟು 5 ಪದಕಗಳನ್ನು ಗೆದ್ದಿದ್ದಾರೆ.
ಬಾಕ್ಸಿಂಗ್ ನಲ್ಲಿ ಅರ್ಜುನ್ ಪ್ರಶಸ್ತಿ ವಿಜೇತರಾದ ಮುಕುಂದ ಕಿಲ್ಲೇಕರ ಅವರು ಬೆಳಗಾವಿ ಜಿಲ್ಲೆಯ ಪ್ರಾತಿನಿಧಿತ್ವ ವನ್ನು ವಹಿಸಿದ್ದರು.