ಬೆಳಗಾವಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡಿ ವಿಷ ಸೇವಿಸಿ ಆತ್ಮಜತ್ಯೆ ಮಾಡಿಕೊಂಡಿದ್ದು ಘಟನೆ ತಿಳಿದ ಪತ್ನಿಯೂ ಮನನೊಂದು ಚಿಕ್ಕ ಕಂದಮ್ಮನನ್ನು ಕೊಂದು ನೇಣಿಗೆ ಶರಣಾದ ಘಟನೆ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಪತಿ ಮಾಡಿದ ತಪ್ಪಿನಿಂದ, ಪತ್ನಿ ದುಡುಕು ಸ್ವಭಾವದಿಂದ ಎನೂ ಅರಿಯದ ಕಂದಮ್ಮನು ಬಲಿಯಾಗಿದ್ದು ಒಂದು ಕುಟುಂಬವೇ ಸಾವಿನ ಮನೆ ಸೇರಿದೆ. ಹೊಸ ವಂಟಮೂರಿ ಗ್ರಾಮದ ಹೊಳೆಪ್ಪಾ ಮಾರುತಿ ಮಸ್ತಿ(25) ಎಂಬಾತ ಗುರುವಾರ ಮದ್ಯ ಸೇವಿಸಿ ಬಂದು ಪತ್ನಿಯೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ವಿಷ ಸೇವಿಸಿದ್ದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.
ಪತಿಯ ಸಾವಿನಿಂದಾಗಿ ತಿವ್ರವಾಗಿ ಮನನೊಂದ ಪತ್ನಿ ವಾಸಂತಿವ ಶುಕ್ರವಾರ ಮಧ್ಯಾಹ್ನ ತನ್ನ ಒಂದೂವರೆ ವರ್ಷದ ಎರಡನೇ ಮಗಳನ್ನು ಎತ್ತಿಕೊಂಡು ಸಮೀಪದ ಮುಸ್ಲಿಂ ಒಬ್ಬರ ಹೊಲಕ್ಕೆ ಹೋಗಿದ್ದಾಳೆ. ಮೊದಲು ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ. ನಂತರ ತಾನೂ ಓಡನಿಯಿಂದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪಿಐ ಗುರುನಾಥ ಐ ಎಸ್, ಪಿಎಸ್ಐ ಮಂಜುನಾಥ ಹುಲಕುಂದ ಸಿಬ್ಬಂದಿ ಪ್ರಕಾಶ ಬಲ್ಲಾಳ, ವಿರುಪಾಕ್ಷೀ ಮಾನಗಾವಿ ಸೇರಿದಂತೆ ಇತರರು ಘಟನೆ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.