ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ 60,252 ಮಕ್ಕಳಿಗೆ ಲಸಿಕೆ ನೀಡುವುದರ ಮೂಲಕ ರಾಜ್ಯದಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದೆ.
15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕಾಕರಣ ಅಭಿಯಾನದಲ್ಲಿ ಬೆಳಗಾವಿ ಜಿಲ್ಲಾಡಳಿತ ದಾಖಲೆ ಮಾಡಿದ್ದು,ಮಕ್ಕಳ ಲಸಿಕಾಕರಣ ಅಭಿಯಾನಕ್ಕೆ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಜಿಲ್ಲಾಡಳಿತ ಶಬಾಶಃ ಎನ್ನಿಸಿಕೊಳ್ಳು ಕಾರ್ಯಮಾಡಿದೆ.
ಸೋಮವಾರ ಒಂದೇ ದಿನ 60,252 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಜಿಲ್ಲೆಯಾದ್ಯಾಂತ 235 ವಿಶೇಷ ಕೇಂದ್ರಗಳನ್ನು ತೆರೆದು, 60,252 ಮಕ್ಕಳಿಗೆ ಲಸಿಕೆ ನೀಡಲಾಗಿದೆ..
ಒಂದೇ ದಿನ 41,880 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದ ಜಿಲ್ಲಾಡಳಿತ,ಗುರಿ ದಾಟಿ ದಾಖಲೆ ಮಾಡಿದೆ ಬೆಳಗಾವಿಯಲ್ಲಿ ಒಟ್ಟು 2 ಲಕ್ಷ 47 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಈ ಗುರಿಯನ್ನು,ಒಂದು ವಾರದಲ್ಲಿ ರೀಚ್ ಆಗ್ತೀವಿ ಎಂದು ಅಧಿಕಾರಿಗಳು ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ.