This is the title of the web page
This is the title of the web page

Please assign a menu to the primary menu location under menu

Local News

ಪಿಎಫ್ಐಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸರು 7ಜನ ಮುಖಂಡರ ಅರೆಸ್ಟ್


ಬೆಳಗಾವಿ: ಪಿಎಫ್ಐ ಸಂಗಟನೆ ಮುಖಂಡರಿಗೆ ಪೊಲೀಸರು ಶಾಕ್ ನೀಡಿದ್ದು ಬೆಳ್ಳಂ ಬೆಳಿಗ್ಗೆ ಕಾರ್ಯಾಚರಣೆ ನಡೆಸುವ ಮೂಲಕ 7 ಜನರನ್ನು ಬಂಧಿಸಿರುವ ಘಟನೆ ನಗರದ ಕಾಕತಿ ಬಳಿ ನಡೆದಿದೆ.

ಬೆಳಗಾವಿಯ ಡಿಸಿಪಿ ರವೀಂದ್ರ ಗಡಾದಿ ಅವರ ನೇತ್ರತ್ವದ ಪೊಲೀಸರ ತಂಡವು ಮಂಗಳವಾರ ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ಕಾಕತಿಯಲ್ಲಿ ದಿಢೀರ್ ಕಾರ್ಯಾಚರಣೆ ಮಾಡಿ 7 ಜನ ಪಿಎಫ್ಐ ಮುಖಂಡರನ್ನು ಬಂಧಿಸಿ ಬೆಳಗಾವಿಯ ಮಾರ್ಕೆಟ್ ಪೊಲೀಸ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ನಡೆದ ಎನ್ಐಎ ದಾಳಿ ಖಂಡಿಸಿ ಯಾವುದೇ ಮುನ್ಸೂನೆ ಇಲ್ಲದೆ ಪಿಎಫ್ಐ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ ನೇತೃತ್ವದಲ್ಲಿ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.     ಈ ಹಿನ್ನೆಲೆಯಲ್ಲಿ ನಡೆಸಿರುವ ಪೊಲೀಸರು ಪಿಎಫ್ಐ ಪಟ್ಟೊಯಲ್ಲಿರುವ ಮುಖಂಡರನ್ನು ಬಂಧಿಸಿದ್ದು ಜಿಲ್ಲಾಧ್ಯಕ್ಷ ನವೀದ್ ಕಟಗಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಎಸಿಪಿಗಳಾದ ನಾರಾಯಣ ಭರಮಣಿ, ಸದಾಶಿವ ಕಟ್ಟಿಮನಿ, ಮಾರ್ಕೆಟ್, ಎಪಿಎಂಸಿ, ಟಿಳಕವಾಡಿ, ಮಾಳಮಾರುತಿ ಠಾಣೆ ಸಿಪಿಐಗಳು ಸೇರಿದಂತೆ ಪೊಲೀಸ್ ಪೇದೆಗಳು ಪಾಲ್ಗೊಂಡಿದ್ದರು.


Gadi Kannadiga

Leave a Reply