This is the title of the web page
This is the title of the web page

Please assign a menu to the primary menu location under menu

Local News

ಕೊಲೆಯ ರಹಸ್ಯೆ ಬೇದಿಸಿದ ಬೆಳಗಾವಿ ಪೊಲೀಸರು ಮೂವರು ಅರೆಸ್ಟ್


ಬೆಳಗಾವಿ: ನಗರದ ಕ್ಯಾಂಪ ಪ್ರದೇಶದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹತ್ಯೆಯ ಜಾಡು ಹಿಡಿದು ಹೋದ ಪೊಲೀಸರಿಗೆ ಸಾಕ್ಷಾಧಾರಗಳನ್ನು ಕಲೆಹಾಕಿದ್ದು ಕೊನೇಗೂ ಕೊಲೆಗಡುಕರ ಕೈಗೆ ಬೇಡಿ ಹಾಕಿದ್ದಾರೆ.

ಕ್ಯಾಂಪ್ ಪ್ರದೇಶದಲ್ಲಿ ಸುಧೀರ ಕಾಂಬಳೆ ಎಂಬುವವರ ಶವ ಸೆಪ್ಟಂಬರ್ 16 ಹಾಗೂ 17ರ ನಡುವಿನ ಅವಧಿಯಲ್ಲಿ ಕ್ಯಾಂಪ್ ನ ಮದ್ರಾಸ್ ಸ್ಟ್ರೀಟ್ ಪ್ರದೇಶದ ಮನೆ ನಂ. 31ಎ ನಲ್ಲಿ ಭರ್ಬರವಾಗಿ ಹತ್ಯ ಮಾಡಿದ ರೀತಿಯಲ್ಲಿ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ
ಮೃತ ಸುಧೀರ್ ಪತ್ನಿ ರೋಹಿಣಿ ಸುಧೀರ ಕಾಂಬಳೆ, ಪುತ್ರಿ ಸ್ನೇಹಾ ಹಾಗೂ ರೋಹಿಣಿಯ ಸ್ನೇಹಿತ ಅಕ್ಷಯ ಮಹಾದೇವ ವಿಠಕರ ಎನ್ನುವವರನ್ನು ಬಂಧಿಸಲಾಗಿದೆ.

ಕೊಲೆಯಾದ ಸುಧೀರ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಹಾಗೂ ಮಗಳಿಗೆ ವಿಪರೀತ ಕಿರುಕುಳ ನೀಡುತ್ತಿದ್ದ, ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದ ಇದನ್ನು ಸಹಿಸಲಾಗದೆ ಮೂವರೂ ಸಂಚು ಹೂಡಿ ಕೊಲೆ ನಡೆಸಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ


Gadi Kannadiga

Leave a Reply