ಬೆಳಗಾವಿ : ಮೂರು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ನಡುವೆ ಸರಣಿ ಅಪಘಾತ ಸಂಭವಿಸಿ, ತಾಯಿ ಹಾಗೂ ಮಗು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ರಕ್ಷಿ ಕ್ರಾಸ್ ಹತ್ತಿರ ರವಿವಾರ ರಾತ್ರಿ ನಡಿದಿದೆ.
ಘಟನೆಯಲ್ಲಿ ಬೈಲಹೊಂಗಲ ತಾಲೂಕಿನ ಬಾರತಿ (28) ಹಾಗೂ ವೇದಾಂತ ಪೂಜೇರಿ (6) ಇವರಿಬ್ಬರು ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಇವರು ದ್ವಿಚಕ್ರ ವಾಹನ ಮೇಲೆ ಸಂಚರಿಸುತ್ತಿದ್ದರು ಎನ್ನಲಾಗಿದೆ.ಇದರಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎರಡು ಕಾರು ಘಟಪ್ರಭಾದಿಂದ ಹುಕ್ಕೇರಿ ಕಡೆ ಬರುತ್ತಿದ್ದವು ಒಂದು ಕಾರು ಗೋಕಾಕದಿಂದ ಹುಕ್ಕೇರಿ ಕಡೆ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.