This is the title of the web page
This is the title of the web page

Please assign a menu to the primary menu location under menu

Local News

ಕಾಟಾಚಾರಕ್ಕೆ ಬೆಳಗಾವಿ ಅಧಿವೇಶನ


ಬೆಳಗಾವಿ : ಇದೇ ದಿ. ೧೯ ರಿಂದ ೧೦ ದಿನ ಈ ಸುವರ್ಣ ಸೌಧದಲ್ಲಿ ಕಾಟಾಚಾರದ ಅಧಿವೇಶನ ನಡೆಯಲಿದೆ. ಎಲ್ಲ ಜನಪ್ರತಿ£ಧಿಗಳೂ ಬಂದುಮೋಜು ಮಾಡಿ ಹೋಗುತ್ತಾರೆ. ನಂತರ ಮುಂದಿನ ವರ್ಷ ಡಿಸೆಂಬರ್ ನಲ್ಲಿ ಮತ್ತೆ ನೆನಪಾಗುತ್ತದೆ. ಬಹುಶಃ ವರ್ಷಕ್ಕೊಮ್ಮೆ ನಮ್ಮ ಜನಪ್ರಿಯ ನಾಯಕರಿಗೆಲ್ಲ ಒಂದು ಬದಲಾವಣೆ ಇರಲಿ, ರಿಲ್ಯಾಕ್ಸ್ ಆಗಲಿ ಎಂಬ ಘನ ಉದ್ದೇಶದಿಂದ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತಾರೆ£ಸುತ್ತದೆ. ಅದಕ್ಕಿಂತ ಹೆಚ್ಚಿನ ಯಾವ ಘನ ಉದ್ದೇಶವಿರಲು ಸಾಧ್ಯ?
ಇದನ್ನುಕಟ್ಟಿಸಿದ ನಂತರ ಮೂರು ನಾಲ್ಕು ಸರಕಾರಗಳು ಬಂದು ಹೋಗಿವೆ. ಆದರೂ ಈ ಸೌಧದ ಸ್ಥಿತಿಗತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆಗುವ ಸಾಧ್ಯತೆಯೂ ಇಲ್ಲ. ಉತ್ತರ / ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿ£ಧಿಗಳಲ್ಲಿ ದಮ್ ಇದ್ದಿದ್ದರೆ, ಜನಪರ ಕಾಳಜಿ ಇದ್ದಿದ್ದರೆ ಸೌಧ ಹನ್ನೆರಡು ತಿಂಗಳೂ ಚಟುವಟಿಕೆಯಿಂದಿರುವಂತೆ ಮಾಡಬಹುದಿತ್ತು. ಅದೇನೂ ಕಂಡುಬರುತ್ತಿಲ್ಲ. ಎಲ್ಲ ಇಲಾಖೆಗಳ ಈ ಭಾಗಕ್ಕೆ ಸಂಬಂಧಿಸಿದ ಎಲ್ಲ ಕೆಲಸ ಇಲ್ಲೇ ಆಗುವಂತೆ ಮಾಡಿದ್ದರೆ ಇಲ್ಲಿಂದ ಜನ ಹಣ,ಶ್ರಮ, ಸಮಯ ಹಾಳು ಮಾಡಿಕೊಂಡು ಬೆಂಗಳೂರಿಗೆ ಹೋಗಿ ಬರುವದು ತಪ್ಪುತ್ತಿತ್ತು. ವರ್ಷದಲ್ಲಿ ಎರಡು ಪೂರ್ಣ ಪ್ರಮಾಣದ ಅಧಿವೇಶನ ಇಲ್ಲಿ ನಡೆಯುವಂತಾದರೆ ಮಾತ್ರ ಇದನ್ನು ಕಟ್ಟಿದ್ದು ಸಾರ್ಥಕವೆ£ಸುತ್ತಿತ್ತು. ಏನೂ ಆಗುತ್ತಿಲ್ಲ. ಏಕೆಂದರೆ ಇಲ್ಲಿಯ ಜನಪ್ರತಿ£ಧಿಗಳಲ್ಲಿ ಅಂತಹ ಯಾವ ಇಚ್ಛಾಶಕ್ತಿಯಾಗಲಿ,ದೂರಾಲೋಚನೆಯಾಗಲಿ ಇಲ್ಲ. ಅವರಿಗೆ ಅವರ ಅಧಿಕಾರ ಮುಖ್ಯ.
ಹತ್ತು ದಿನ ಸುಮಾರು ೨೦-೩೦ ಕೋಟಿ ಹಣ ಹಾಳು ಮಾಡಿ ಒಂದಿಷ್ಟು ಕಸಕಡ್ಡಿ ಬಿಟ್ಟುಹೋಗುತ್ತಾರೆ. ಸ್ವಚ್ಛ ಮಾಡುವದಷ್ಟೇ ನಮ್ಮ ಕೆಲಸ.


Gadi Kannadiga

Leave a Reply