ಬೆಳಗಾವಿ ; ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ ಯಾಗಿ ಉಳಿದಿರುವ ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಮೂರು ಜಿಲ್ಲೆಗಳ ಆಗಬೇಕು ಎಂದು ಸಚಿವ ಉಮೇಶ್ ಕತ್ತಿ ಹೇಳಿದರು .
ಪತ್ರಕರ್ತರೊಂದಿಗೆ ಮಾತನಾಡಿದ ಅವರು ದೊಡ್ಡ ಜಿಲ್ಲೆ ಧಾರವಾಡ ವಿಭಜನೆಯಾಗಿ ಮೂರು ಜಿಲ್ಲೆಗಳಾಗಿ ರಚನೆಯಾಯಿತು ಅದೇ ಮಾದರಿಯಲ್ಲಿ ವಿಸ್ತಾರವಾಗಿರುವ ಬೆಳಗಾವಿ ಜಿಲ್ಲೆಯು ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮೂರು ಜಿಲ್ಲೆಗಳಾಗಬೇಕು ಎಂದು ಅವರು ಹೇಳಿದರು .
ಇಪ್ಪತ್ತು ವರ್ಷಗಳ ಹಿಂದೆ ಜೆ ಎಚ್ ಪಟೇಲರ ಸರ್ಕಾರವಿತ್ತು ಆಗ ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಾಗಿದ್ದ ಕಾರಣ ಜಿಲ್ಲೆ ವಿಭಜನೆ ಬೇಡ ಕೂಗು ಕೇಳಿಬಂತು ಹೀಗಾಗಿ ಜಿಲ್ಲಾ ವಿಭಜನೆ ಅಲ್ಲಿಗೆ ನಿಂತಿತ್ತು .ಈಗ ಮರಾಠಿಗರ ಪ್ರಾಬಲ್ಯ ಕಡಿಮೆಯಾಗಿದೆ ಈ ಹಿನ್ನೆಲೆಯಲ್ಲಿ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಆಡಳಿತಾತ್ಮಕ ದೃಷ್ಟಿಯಿಂದಲೂ ಚಿಕ್ಕ ಚಿಕ್ಕ ಜಿಲ್ಲೆಗಳು ಇರಬೇಕು ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ವಿಭಜನೆ ಕುರಿತು ಮುಖ್ಯಮಂತ್ರಿ ಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು .
ಬೆಳಗಾವಿ ಜಿಲ್ಲೆಯಲ್ಲಿ ಇರುವ ಮೂರು ಉಪವಿಭಾಗಾಧಿಕಾರಿಗಳ ಸ್ಥಾನಗಳನ್ನು ಜಿಲ್ಲಾ ಕೇಂದ್ರ ಗಳಾಗಿ ಮಾಡಿದರೆ ಅನುಕೂಲವಾಗುತ್ತದೆ ಬೆಳಗಾವಿ ಚಿಕ್ಕೋಡಿ ಮತ್ತು ಬೈಲಹೊಂಗಲ ಇವುಗಳನ್ನು ಆಡಳಿತಾತ್ಮಕ ದೃಷ್ಟಿಯಿಂದ ಉಪವಿಭಾಗೀಯ ಕೇಂದ್ರಗಳಾಗಿ ಮಾಡಿದ್ದು ಬ್ರಿಟಿಷರ ಕಾಲದಲ್ಲಿ ಹೀಗಾಗಿ ಅಲ್ಲಿಯೇ ಜಿಲ್ಲಾ ಕೇಂದ್ರಗಳಾದರೇ ಆಡಳಿತಕ್ಕೆ ಮತ್ತು ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಪ್ರತಿಪಾದಿಸಿದರು .
ಶೀಘ್ರದಲ್ಲೇ ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೋಗುತ್ತಿರುವುದಾಗಿ ಹೇಳಿದ ಅವರು ಬೆಳಗಾವಿ ಜಿಲ್ಲೆಯ ಎಲ್ಲ ಪಕ್ಷಗಳ ನಾಯಕರು ಕೂಡ ಬರುವುದಾದರೆ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ತಾವು ಸಿದ್ಧರಿರುವುದಾಗಿ ಹೇಳಿದರು .ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಇಂದಿನದಲ್ಲ ಚಿಕ್ಕೋಡಿ ಜಿಲ್ಲೆಯಾಗಬೇಕು ಎಂಬ ಕೂಗು ಇಂದಿನದಲ್ಲ ಎಂದು ವಿವರಿಸಿದ ಅವರು ಜಿಲ್ಲೆಯ ಜನಪ್ರತಿನಿಧಿ ವಿಶ್ವಾಸಕ್ಕೆ ತೆಗೆದುಕೊಂಡು ತಾವು ಜಿಲ್ಲಾ ವಿಭಜನೆಯಾಗಿ ನೂತನ ಜಿಲ್ಲೆ ರಚನೆ ಸಂಬಂಧ ಪ್ರಯತ್ನಿಸುವುದಾಗಿ ಹೇಳಿದರು .