This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯ ಸ್ಮಾರ್ಟಸಿಟಿ ೮ ನೇ ವರ್ಷಾಚರಣೆ ಸಂಭ್ರಮ


ಬೆಳಗಾವಿ, ಜೂ.೨೭ : ಸ್ಮಾರ್ಟಸಿಟಿ ಯೋಜನೆ ಪ್ರಾರಂಭವಾಗಿ ೮ ವರ್ಷಗಳು ತುಂಬಿದ ಪ್ರಯುಕ್ತ ಬೆಳಗಾವಿ ಸ್ಮಾರ್ಟಸಿಟಿ ಕಛೇರಿಯಿಂದ ೮ ನೇ ವರ್ಷಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಂಜಾನೆ ೭ ಗಂಟೆಗೆ ಹನುಮಾನ ನಗರ ವೃತ್ತದಿಂದ ಜಿಎಸ್ ಟಿ ಆಫೀಸ್ ಮಾರ್ಗವಾಗಿ ಕ್ಲಬ್ ರಸ್ತೆ ಮೂಲಕ ರಾಣಿಚನ್ನಮ್ಮ ವೃತ್ತದವರೆಗೆ ಸೈಕ್ಲಿಂಗ್ ಮತ್ತು ವಾಕಿಂಗ್ ಮ್ಯಾರಥಾನ್ ಆಯೋಜಿಸಲಾಗಿತ್ತು. ಸಂಸದರಾದ ಮಂಗಲಾ ಅಂಗಡಿ, ಶಾಸಕ ಆಸೀಫ ಸೇಠ್, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಸ್ಮಾರ್ಟಸಿಟಿ ಕಛೇರಿಯ ವ್ಯವಸ್ಥಾಪಕ ನಿರ್ದೇಶಕರಾದ ಸಯ್ಯದಾ ಆಫ್ರೀನಬಾನು ಬಳ್ಳಾರಿ, ಬುಡಾ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಎ..ಎಮ್. ಮಿರ್ಜನ್ನವರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕುರಿಹೊಳಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸ್ಥಳೀಯ ನಗರಸೇವಕರು ಹಾಗೂ ಸ್ಥಳೀಯ ಪೆಡ್ಲಿಂಗ್ ಅಸೋಶಿಯೇಷನ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮ್ಯಾರಥಾನ ವೇಳೆ ಸುಗಮ ಸಂಚಾರಕ್ಕೆ ಪೋಲಿಸ್ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು.
ತದನಂತರ ೧೦.೩೦ ಗಂಟೆಗೆ ನಗರದ ಅಂಜುಮನ್ ಇ-ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಶಾಸಕರಾದ ಆಸೀಫ ಸೇಠ ರವರು ಕಾರ್ಯಕ್ರವನ್ನು ಉದ್ಘಾಟಿಸಿ ಸ್ಮಾರ್ಟಸಿಟಿ ಕುರಿತಾದ ಮಕ್ಕಳ ಕಲ್ಪನೆಗಳ ಬಗ್ಗೆ ವಿವರ ಪಡೆದುಕೊಂಡು ಚಿತ್ರಕಲೆಯ ಆಸಕ್ತಿ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು. ಭರತೇಶ ಶಿಕ್ಷಣ ಸಂಸ್ಥೆಯ ಇಂಗ್ಲೀಷ್ ಹಾಗೂ ಕನ್ನಡ ಮಾಧ್ಯಮ ಶಾಲೆ, ಬಿ.ಕೆ. ಮಾಡೆಲ್ ಶಾಲೆ, ಎನ್.ಎಸ್. ಪೈ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಸೇರಿದಂತೆ ೭೦ಕ್ಕೂ ಅಧಿಕ ವಿದ್ಯಾರ್ಥಿಗಳು ‘ಭೂಮಿ &ಪರಿಸರ ಉಳಿಸಿ’ಹಾಗೂ ‘ನನ್ನ ಕನಸಿನ ಶಾಲೆ’ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಚಿತ್ರಕಲೆ ರಚಿಸಲು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಲಾವಿದ ಆಕಾಶ ಹಲಗೇಕರ & ಬಿ.ಕೆ ಮಾಡೆಲ್ ಕಲಾ ಶಿಕ್ಷಕರಾದ ಪ್ರಮೋದ ಜೋಶಿ ನಿರ್ಣಾಯಕರಾಗಿ ಸ್ಫರ್ಧೆಯ ಕ್ರಮವಾಗಿ ಮೂರು ಚಿತ್ರಗಳನ್ನು ಹಾಗೂ ಸಮಾಧಾನಕರ ಎರಡು ಚಿತ್ರಗಳನ್ನು ಆಯ್ಕೆಮಾಡಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಮಾರ್ಟಸಿಟಿ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರವನ್ನು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಸ್ಮಾರ್ಟಸಿಟಿ ಮಹತ್ವಾಕಾಂಕ್ಷಿ ಕಾಮಗಾರಿಗಳಲ್ಲಿ ಒಂದಾಗಿರುವ ಕಮಾಂಡ್ & ಕಂಟ್ರೋಲ್ ಸೆಂಟರ್ ನ ಕಾರ್ಯನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳ ಗಮನಕ್ಕೆ ತಂದು ಸ್ಮಾರ್ಟ ನಗರದ ಪರಿಕಲ್ಪನೆ ಹಾಗೂ ಕಮಾಂಡ್ & ಕಂಟ್ರೋಲ್ ಸೆಂಟರ್ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ಈ ವೇಳೆ ಎಸ್.ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.
ಸ್ಮಾರ್ಟಸಿಟಿ ಯೋಜನೆಗೆ ೮ ನೇ ವರ್ಷ ತುಂಬಿದ ಪ್ರಯುಕ್ತ ಕೇಂದ್ರ ಸರ್ಕಾರದ ನಿರ್ದೇಶನದನ್ವಯ ೮ನೇ ವರ್ಷಾಚರಣೆ ಕಾರ್ಯಕ್ರಮವನ್ನು ಆಯೋಜಿಸುವಂತೆ ನೀಡಿದ ನಿರ್ದೇಶನದ ಮೇರೆಗೆ ಈ ಮೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೂ ವಂದಿಸಿ ಕಾರ್ಯಕ್ರಮವನ್ನು ಸಮಾರೋಪ ಮಾಡಲಾಯಿತು.


Leave a Reply