This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ತಾಲೂಕು ಮಟ್ಟದ ಗ್ರಾಮೀಣ ಕೂಟ ಜ.೨ ರಿಂದ


ಬೆಳಗಾವಿ, ಡಿ.೨೭ : ಬೆಳಗಾವಿ ತಾಲೂಕು ಮಟ್ಟದ ಗ್ರಾಮೀಣ ಕೂಟವನ್ನು ದಿನಾಂಕ ೦೨ ಮತ್ತು ೦೩ನೇ ಜನವರಿ ೨೦೨೩ ರಂದು ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದು, ಜ.೨ ರಂದು ಖೋಖೋ ಮತ್ತು ಕಬಡ್ಡಿ ಸ್ಪರ್ಧೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಜ.೩ ರಂದು ಕುಸ್ತಿ, ಯೋಗ ಮತ್ತು ಎತ್ತಿನಗಾಡಿ ಸ್ಪರ್ಧೆಗಳನ್ನು ಕಡೋಲಿ ಗ್ರಾಮ ಶಿವಾಜಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಬೆಳಗಾವಿ ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಸಂಘಟಿಸಲಾದ ಗ್ರಾಮೀಣ ಕೂಟದ ಕಬಡ್ಡಿ, ಖೋಖೋ, ಕುಸ್ತಿ, ಎತ್ತಿನಗಾಡಿ ಹಾಗೂ ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಸ್ಪರ್ಧೆಗಳು ನಡೆಯುವ ದಿನಾಂಕಗಳಂದು ಬೆಳಿಗ್ಗೆ ೯ ಗಂಟೆಗೆ ಹಾಜರಿದ್ದು, ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ.
ನಿಯಮಗಳು :
ಗ್ರಾಮ ಪಂಚಾಯತ ಮಟ್ಟದ ಗ್ರಾಮೀಣ ಕೂಟದಲ್ಲಿ ಪ್ರಥಮ ಸ್ಥಾನ ಪಡೆದ/ಆಯ್ಕೆ ತಂಡಗಳು ತಾಲೂಕು ಮಟ್ಟದಲ್ಲಿ ಭಾಗವಹಿಸುವುದು (ಪ್ರತಿ ಗ್ರಾಮ ಪಂಚಾಯತನಿಂದ ಒಂದು ತಂಡ).
ತಾಲೂಕು ಮಟ್ಟದ ಗ್ರಾಮೀಣ ಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟೋಪಹಾರವನ್ನು ಒದಗಿಸಲಾಗುವುದು.
ತಾಲೂಕು ಮಟ್ಟದಲ್ಲಿ ವಿಜೇತರಾಗುವ ಕ್ರೀಡಾಪಟುಗಳಿಗೆ ನಗದು ಬಹುಮಾನವನ್ನು ಕೇಂದ್ರ ಕಚೇರಿಯಿಂದ ಪಾವತಿಸಲಾಗುವುದು. ಆದ್ದರಿಂದ ವಿಜೇತ ಕ್ರೀಡಾಪಟುಗಳ ಬ್ಯಾಂಕ್ ಪಾಸ್‌ಬುಕ್ ಮತ್ತು ಮುಂಗಡ ಸ್ವೀಕೃತಿ ರಸೀದಿಯನ್ನು ಸಲ್ಲಿಸುವುದು.
ಸರ್ಕಾರದ ಮಾರ್ಗಸೂಚಿ ಅನ್ವಯ ಗ್ರಾಮೀಣ ಕೂಟವನ್ನು ನಡೆೆಸಲಾಗುವದು.
ಖೋಖೋ, ಕಬಡ್ಡಿ ಸ್ಪರ್ಧೆಗಳ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ. ೭೪೧೧೧೪೪೪೮೫, ಕುಸ್ತಿ, ಯೋಗ, ಎತ್ತಿನ ಗಾಡಿ ಸ್ಪರ್ಧೆಗಳ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ. ೯೮೪೫೩೦೬೨೯೨ ಅಥವಾ ಕಛೇರಿ ದೂರವಾಣಿ ಸಂಖ್ಯೆ. ೦೮೩೧-೨೯೫೦೩೦೬ ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply