This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ


ಬೆಳಗಾವಿ:- ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ, ಬೆಳಗಾವಿ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸೋಮವಾರ ದಿ:೧೨/೧೨/೨೦೨೨ರಂದು,ಶ್ರೀ.ತೋಂಟದಾರ್ಯ ವಿರಕ್ತಮಠ, ತಪೋಕ್ಷೇತ್ರ ಸಾ:ಅರಳೀಕಟ್ಟಿಯಲ್ಲಿ ನಡೆಯಲಿದೆ. ಮುಂಜಾನೆ:೮:೩೦ ಘಂಟೆಗೆ, ನಿವೃತ್ತ ಶಿಕ್ಷಣ ಹಾಗೂ ಸೇನಾಧಿಕಾರಿಗಳು ಶ್ರೀ.ಬಸವರಾಜ ಬಿ. ವಣ್ಣೂರ ಅವರು ರಾಷ್ಟ್ರ ಧ್ವಜವನ್ನು ನೆರವೇರಿಸುವರು. ಕ. ಸಾ. ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಪರಿಷತ್ತಿನ ಧ್ವಜವನ್ನು ನೆರವೇರಿಸುವರು. ಬೆಳಗಾವಿ ತಾಲೂಕಾಧ್ಯಕ್ಷರಾದ ಶ್ರೀ.ಸುರೇಶ ಹಂಜಿ ಅವರು ನಾಡಧ್ವಜವನ್ನು ನೆರವೇರಿಸುವರು. ಸಮ್ಮೇಳನವು ಶ್ರೀ.ಮ.ನಿ.ಪ್ರ.ಸ್ವ.ಶಿವಮೂರ್ತಿ ಮಹಾಸ್ವಾಮಿಗಳು ಶ್ರೀ.ತೋಂಟದಾರ್ಯ ವಿರಕ್ತಮಠ, ತಪೋಕ್ಷೇತ್ರ ಅರಳೀಕಟ್ಟಿ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಬೆಳಗಾವಿ ಗ್ರಾಮೀಣ ಮಾನ್ಯ ಶಾಸಕರಾದ ಶ್ರೀಮತಿ. ಲಕ್ಷ್ಮೀ ಹೆಬ್ಬಾಳಕರ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಅರಳೀಕಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ.ಚಂದ್ರವ್ವ ಕಟ್ಟಿಮನಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಳಗಾವಿಯ ಹಿರಿಯ ಸಾಹಿತಿಗಳಾದ ಶ್ರೀಮತಿ.ಆಶಾ ಕಡಪಟ್ಟಿ ಅವರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕ. ಸಾ. ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಮಾನ್ಯ ಸತೀಶ ಜಾರಕಿಹೊಳಿ ಶಾಸಕರು ಯಮಕನಮರಡಿ, ಮಾನ್ಯ ಶ್ರೀ ಅಭಯ ಪಾಟೀಲ ಶಾಸಕರು ಬೆಳಗಾವಿ ದಕ್ಷಿಣ, ಮಾನ್ಯ ಶ್ರೀ. ಅನಿಲ ಬೆನಕೆ ಶಾಸಕರು ಬೆಳಗಾವಿ ಉತ್ತರ, ಮಾನ್ಯ ಶ್ರೀ. ಪ್ರಕಾಶ ಹುಕ್ಕೇರಿ ವಿಧಾನ ಪರಿಷತ್ ಸದಸ್ಯರು, ಮಾನ್ಯ ಶ್ರೀ.ಹನುಮಂತ ನಿರಾಣಿ ವಿಧಾನ ಪರಿಷತ್ ಸದಸ್ಯರು, ಮಾನ್ಯ ಶ್ರೀ. ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯರು, ಮಾನ್ಯ ಶ್ರೀ.ಲಖನ್ ಲ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯರು, ನಿತೀಶ್ ಕೆ ಪಾಟೀಲ ಭಾ.ಆ.ಸೇ ಜಿಲ್ಲಾಧಿಕಾರಿಗಳು ಬೆಳಗಾವಿ, ಮಾನ್ಯ ಶ್ರೀ. ದರ್ಶನ ಹೆಚ್ ವಿ ಭಾ.ಆ.ಸೇ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ.ಬೆಳಗಾವಿ, ಮಾನ್ಯ ಶ್ರೀ. ಬೋರಲಿಂಗಯ್ಯಾ ಪೋಲಿಸ್ ಆಯುಕ್ತರು ಬೆಳಗಾವಿ, ಮಾನ್ಯ ಶ್ರೀ. ಬಸವರಾಜ ನಾಲತವಾಡ ಉಪನಿರ್ದೇಶಕರು ಸಾ.ಶಿ.ಇಲಾಖೆ ಬೆಳಗಾವಿ, ಮಾನ್ಯ ಶ್ರೀ. ಭರತ ಕುಂಡಲ್ ಘಟಕ ಮುಖ್ಯಸ್ಥರು ಓಲಮ್ ಶುಗರ್ ಕಾರ್ಖಾನೆ ರಾಜಗೋಳಿ, ಮಾನ್ಯ ಶ್ರೀ. ಎಚ್. ಐ. ತಿಮ್ಮಾಪೂರ ಪ್ರಾಂಶುಪಾಲರು ಅಂಜುಮನ್ ಪದವಿ ಕಾಲೇಜು, ಬೆಳಗಾವಿ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಆಗಮಿಸಿಲಿದ್ದಾರೆ. ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಸಾಹಿತಿಗಳು, ಕಲಾವಿದರು, ಬೆಳಗಾವಿ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಹಾಗೂ ಬೆಳಗಾವಿ ತಾಲೂಕಾಧ್ಯಕ್ಷರಾದ ಶ್ರೀ.ಸುರೇಶ ಹಂಜಿ ಅವರು ವಿನಂತಿಸಿಕೊಂಡಿದ್ದಾರೆ.


Gadi Kannadiga

Leave a Reply