This is the title of the web page
This is the title of the web page

Please assign a menu to the primary menu location under menu

Local News

ಚಿಂತಕರ ಚುನಾವಣೆಗೆ ಉತ್ತಮ  ಪ್ರತಿಕ್ರಿಯೆ ಸಾರದಿಯಲ್ಲಿ ನಿಂತು ಮತ ಚಲಾಯಿಸಿದ ಬೆಳಗಾವಿ ಮತದಾರರು


ಬೆಳಗಾವಿ:ವಾಯುವ್ಯ ಶಿಕ್ಷಕ ಹಾಗೂ ಪದವಿದರ ಕ್ಷೇತ್ರದ ಚುನಾವಣಾ ಕಣದಲ್ಲಿ ಒಟ್ಟು 49 ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದು, ಮೊದಮೊದಲು ಎಲ್ಲರ ನಡುವೆ ಕಠಿಣವಾದ ಸ್ಪರ್ದೆ ನಡೆಯುತ್ತೆ ಎನ್ನುವ ಸನ್ನಿವೇಶವಿತ್ತು.

ಆದರೆ ದಿನ ಕಳೆದಂತೆ ಕೆಲವೊಂದು ಅಭ್ಯರ್ಥಿಗಳು ಬೇರೆ ಅಭ್ಯರ್ಥಿಗೆ ನಷ್ಟ ಮಾಡಲು ಹಾಗೂ ಮತವಡೆಯಲು ಉದ್ದೇಶಪೂರ್ವಕವಾಗಿ ನಿಂತಂತ ಡಮ್ಮಿ ಪೀಸ್ ಗಳು ಅಂತಾ ಅನುಮಾನವಾಯಿತು. ಕೊನೆಗೆ ಬಲಿಷ್ಠ ಪಕ್ಷಗಳ ಅಭ್ಯರ್ಥಿಗಳು ಕೂಡಾ ತಮ್ಮ ತಮ್ಮ ನಡುವೆ ಹೊಂದಾಣಿಕೆ ಮಾಡಿಕೊಂಡಂತೆ ವರ್ತನೆ ಮಾಡಿದವು ಎಂಬ ಅನುಮಾನ ಉಂಟಾಯಿತು.

ಕೊನೆಯದಾಗಿ ಸೋಮವಾರ 13 ತಾರಿಕಿನ ಸಂಜೆಗೆ ಮತದಾನಕ್ಕೆ ತೆರೆಬಿದ್ದಿದೆ. ನಗರದಲ್ಲಿ ಸುಮಾರು ಮತಗಟ್ಟೆಗಳಿದ್ದು, 29 ಸಂಖ್ಯೆಯ ಮಹಾಂತೇಶ್ ನಗರದ ಮತಗಟ್ಟೆಯಲ್ಲಿ ಸ್ವಲ್ಪ್ ಗೊಂದಲ ಹಾಗೂ ಗಲಾಟೆ ನಡೆದದ್ದು, ಉಳಿದ ಕಡೆ ಸರಳವಾಗಿ ಮತದಾನ ನಡೆಯಿತು ಎನ್ನಬಹುದು .

ಇನ್ನು ವಿಶ್ವೇಶ್ವರಯ್ಯ ನಗರದ ಮತಗಟ್ಟೆಯಲ್ಲಿ ಶಾಸಕ ಅನಿಲ ಬೆನಕೆ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿರುವರು ಎಂದು ಅವರು ಸೇರಿ ಒಟ್ಟು ಐದು ಜನರ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಪ್ರಮಾಣದ ಮತದಾನ ಆಗಿದ್ದು, ಶಿಕ್ಷಕರ ಕ್ಷೇತ್ರಕ್ಕೆ 86.72% ಹಾಗೂ ಪದವಿದರ ಕ್ಷೇತ್ರಕ್ಕೆ 67.80% ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.


Gadi Kannadiga

Leave a Reply