This is the title of the web page
This is the title of the web page

Please assign a menu to the primary menu location under menu

Local News

ಮಳೆರೆ ಅವಾಂತರಕ್ಕೆ ನಲುಗಿದ ರಾಜ್ಯ, ಬೆಳಗಾವಿಯಲ್ಲೂ ನರಕಯಾತನೆ


ಬೆಳಗಾವಿ: ಬದುಕಲ್ಲೊಂದು ಹೊಸ ಆಸೆ ಮೂಡಿಸಲು ಬರಬೇಕಿದ್ದ ಮಳೆ ಅಕ್ಷರಶಃ ನರಕವನ್ನು ಸೃಷ್ಟಿಸಿದೆ. ಎತ್ತ ನೋಡಿದತ್ತ ನೀರು, ದರೆಗೆ ಉರಳುತ್ತಿರುವ ಮರಗಳು, ನೆಲಕಚ್ಚುತ್ತಿರುವ ಮನೆಗಳು, ಉಕ್ಕಿ ಬರುತ್ತಿರುವ ನದಿಗಳು, ವಾಸಿಸಲು ಜಾಗವಿಲ್ಲದೆ ಬೀದಿಗೆ ಬೀಳುತ್ತಿರುವ ಕುಟುಂಬಗಳು, ಆಹಾರಕ್ಕೂ ಪರದಾಡುವ ಪರಿಸ್ಥಿತಿ, ಎಲ್ಲೇಡೆ ಸಾವಿನ ಕೂಗು, ಕಾಣೆಯಾದವರಿಗಾಗಿ ಹುಡುಕಾಟ ಇದು ರಾಜ್ಯದಲ್ಲಿ ಮಳೆ ಸೃಷ್ಟಿಸಿದ ಅವಾಂತರ ಎಂದರೆ ತಪ್ಪಾಗಲಾರದು.

ಒಂದಲ್ಲಾ ಎರಡಲ್ಲಾ ಸಾಲು ಸಾಲು ಸಮಸ್ಯೆಗಳನ್ನ ಮೂಟೆ ಕಟ್ಟಿಕೊಂಡು ಹಾವಳಿ ಮಾಡಲೆಂದೆ ಭೂಮಿಗೆ ಬಂದಂತೆ ವರ್ತಿಸುತ್ತಿದ್ದಾನೆ ಮಳೆರಾಯ. ಬೆಳಗಾವಿ ಕೂಡ ಈ ಎಲ್ಲ‌ ಸಮಸ್ಯೆಗಳಿಂದ ಹೊರತಾಗಿಲ್ಲ.

ಮಲೆನಾಡಿನ ಸೆರಗಂಚಾದ ಬೆಳಗಾವಿ ತುಂತುರು ಮಳೆಯಿಂದ ಸಿಂಗಾರಗೊಂಡು ಪ್ರವಾಸಿಗರನ್ನು ಕೈಮಾಡಿ ಕರೆಯಬೇಕಿತ್ತು ಆದರೆ ಕಳೆದ 15 ದಿನಗಳಿಂದ ವರುಣರಾಯ ನಿಜಕ್ಕೂ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ  ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ.

ಗುರುವಾರ ಬೆಳಿಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ  ವಡಗಾವಿಯ ಕೇಶವ ನಗರ, ಅನ್ನಪೂರ್ಣೇಶ್ವರಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಅನ್ನಪೂರ್ಣೇಶ್ವರಿ 6ನೇ ಕ್ರಾಸ್‍ನಲ್ಲಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಇನ್ನು ಕೇಶವ ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆಳ ಮಹಡಿ ಬಿಟ್ಟು ಮೇಲಮಹಡಿಗೆ ಕೆಲ ಜನರು ಶಿಫ್ಟ್ ಆಗಿದ್ದಾರೆ. ಆದರೆ ಒಂದೇ ಮಹಡಿ ಇದ್ದ ಜನರು ಪರದಾಡುತ್ತಿದ್ದು, ಮನೆಯಿಂದ ನೀರು ಹೊರಗೆ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.ಈ

ಪ್ರದೇಶದಲ್ಲಿಯ ಸಮಸ್ಯೆ ನಿನ್ನೆ ಮೊನ್ನೆಯದಲ್ಲಾ ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆಯಿಂದ ನಿವಾಸಿಗಳಿ ಬಳಲಿ ಬೆಂಡಾಗಿದ್ದರು ಪಾಲಿಕೆ ಅಧಿಕಾರಿಗಳು ಚಳಿಗೆ ಬಿಸಿ ಕಾಯಿಸುತ್ತ ಆರಾಮಾಗಿದ್ದಾರೆ.

ಇದು ಇನ್ನೂ ಮಳೆಗಾಲದ ಮದ್ಯಭಾಗ ಈಗಲೇ ಇಷ್ಟೊಂದು ಅವಾಂತರಗಳು ತಲೆದೂರಿದ್ದು ಮುಂದಿನ ದಿನಗಳನ್ನು ಎದುರಿಸುವುದು ಹೇಗೆ ಎಂದು ಸಾರ್ವಜನೀಕರು ಭಯ ಬೀತರಾಗಿದ್ದಾರ. ಇನ್ನಾದರು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬೇಟಿಕೊಟ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.


Gadi Kannadiga

Leave a Reply