This is the title of the web page
This is the title of the web page

Please assign a menu to the primary menu location under menu

Local News

ಸಂಭಾಜಿ ಮಹಾರಾಜ ಉದ್ಯಾನವನದ ಕಾಮಗಾರಿ ವಿಕ್ಷಣೆ ಮಾಡಿದ ಶಾಸಕ ಬೆನಕೆ


ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರ ನೈತೃತ್ವದಲ್ಲಿ ಸಂಭಾಜಿ ಉದ್ಯಾನದ ಪ್ರಗತಿ ಕಾಮಗಾರಿಯ ನಿರಿಕ್ಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಈ ಕೆಲಸವನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರನ್ನು ಕುಡಾ ಕರೆಯಲಾಗಿತ್ತು ಮತ್ತು ಈ ಗುತ್ತಿಗೆದಾರರು ನಿಧಾನಗತಿಯಿಂದ ಕಾಮಗಾರಿಯನ್ನು ಮಾಡುತ್ತಿದ್ದು ಆದಕ್ಕೆ ಶಾಸಕ ಅನಿಲ ಬೆನಕೆ ಅವರು ಈ ಗುತ್ತಿಗೆದಾರರನ್ನು ತರಾಟೆಗೆ ತೊಗೊಂಡು ಈ ಕಾಮಗಾರಿಯು ವಿಳಂಬವಾಗಲಿಕೆ ಕಾರಣವನ್ನು ಕೇಳಿದರು.

ಸಮರ್ಪಕ ಉತ್ತರವನ್ನು ನೀಡಲಾಗದ ಗುತ್ತಿಗೆದಾರರಿಗೆ ಈ ಕಾಮಗಾರಿಯು ನಿಗದಿತ ಸಮಯದಲ್ಲಿ ತ್ವರಿತಗತಿಯಿಂದ ನಿಖರಪೂರ್ವಕವಾಗಿ ಮುಕ್ತಾಯಗೊಳ್ಳಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರನ್ನು ಒಳಗೊಂಡು ಮಹಾನಗರಪಾಲಿಕೆಯ ಸದಸ್ಯರುಗಳಾದ ಸಂತೋಷ ಪೆಡಣೆಕರ, ಜಯತಿರ್ಥ ಸವದತ್ತಿ, ಸಂಚಾಲಕರಾದ ಪ್ರಸಾದ ಮೋರೆ ಮತ್ತು ಅನೇಕ ನಾಗರಿಕರು ಭಾಗಿಯಾಗಿದ್ದರು.


Gadi Kannadiga

Leave a Reply