This is the title of the web page
This is the title of the web page

Please assign a menu to the primary menu location under menu

Local News

ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬೆನಕೆ


ಬೆಳಗಾವಿ:ಬೆಳಗವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯ ರೋಗ ನಿಯಂತ್ರಣ ವಿಭಾಗ, ವಾರ್ತಾ ಮತ್ತು ಪ್ರಚಾರ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕೆ.ಎಲ್.. ಜೆ,ಎನ್.ಎಮ್.ಸಿ ಕ್ಯಾಂಪಸ್‍ನಲ್ಲಿರುವ ಡಾ. ಬಿ. ಎಸ್. ಕೋಡಕಿಣಿ ಸಬಾಭವನದಲ್ಲಿ ಆಯೋಜಿಸಲಾದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮವನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಟಿಬಿ ರೋಗವು 20 ರಿಂದ 30 ವರ್ಷಗಳ ಹಿಂದೆ ಬಹಳ ಗಂಭೀರವಾದ ಖಾಯಿಲೆಯಾಗಿತ್ತು, ಕೋರೋನಾಗಿಂತಲೂ ದೊಡ್ಡ ಪ್ರಮಾಣದ ರೋಗವಾಗಿತ್ತು. ಈ ಮೊದಲು ಟಿಬಿ ಆಗಿದೆ ಎಂದರೆ ಸಾಕು ಆ ರೋಗಿಯನ್ನು ಮನೆಯಿಂದ ಅಥವಾ ಊರಿನಿಂದ ಹೊರಗೆ ಹಾಕುತ್ತಿದ್ದರು.

ಆದರೆ ಈಗಿನ ಪರಿಸ್ಥಿತಿ ಬದಲಾಗಿದ್ದು, ಸರ್ಕಾರಗಳು ಟಿಬಿ ನಿಯಂತ್ರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ರೂಪಿಸಿ ಔಷದೋಪಚಾರ ಮಾಡಲಾಗುತ್ತಿದೆ ಎಂದರು. ಕ್ಷಯ ರೋಗ ನಿಯಂತ್ರಣ ಮಾಡುವಲ್ಲಿ ನಮ್ಮ ಬೆಳಗಾವಿ ಜಿಲ್ಲಯು ಬೆಳ್ಳಿ ಪದಕ ಪಡೆದುಕೊಂಡಿರುವುದು ಸಂತಸದ ಸಂಗತಿಯಾಗಿದ್ದು, ಹೀಗಾಗಿ ಇದಕ್ಕೆ ಶ್ರಮವಹಿಸಿರುವ ಎಲ್ಲರಿಗೂ ವಿಶೇಷ ಅಭಿನಂದನೆಯನ್ನು ತಿಳಿಸಿದರು.

ನಂತರದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ವಾಕ್ಸಿನೇಷನ್ ನಲ್ಲಿ ಶೇ. 100 ರಷ್ಟು ಗುರಿ ಸಾಧಿಸಿದ ರಾಜ್ಯದ ಆರು ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆ ಕೂಡ ಒಂದಾಗಿದ್ದು, ಇನ್ನು ಕ್ಷಯ ರೋಗ ದಿನಾಚರಣೆ ನಿಮಿತ್ಯ ನೀಡಿದ ಪ್ರಶಸ್ತಿಯಲ್ಲಿ ಬೆಳಗಾವಿ ಜಿಲ್ಲೆ ಬೆಳ್ಳಿ ಪದಕ ಪಡೆದುಕೊಂಡಿದೆ.

ಈ ರೀತಿ ಸಾಧನೆ ಮಾಡಿದ ರಾಜ್ಯದ 5 ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆಯು ಒಂದು ಎಂದರು. ಪ್ರಧಾನಿಗಳಾದ ನರೇಂದ್ರ ಮೋದಿರವರು ಗ್ಯಾಸ್ ಸೌಲಭ್ಯವನ್ನು ಹೆಚ್ಚಿಗೆ ಮಾಡಿದ್ದರಿಂದ ಹಳ್ಳಿಗಳಲ್ಲಿ ಕ್ಷಯರೋಗವು ಕಡಿಮೆಯಾಗಿದ್ದು, ಶೇ. 40ಕ್ಕಿಂತ ಹೆಚ್ಚು ಕ್ಷಯರೋಗ ಕಡಿಮೆಯಾಗಿದೆ ಮುಂದಿನ ವರ್ಷ ಚಿನ್ನದ ಪದಕ ಪಡೆಯುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಮ್. ಜಿ. ಹಿರೇಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್ ವ್ಹಿ. ಮುನ್ಯಾಳ, ಡಾ. ತುಕ್ಕಾರ, ಡಾ.ಆರ್.ಸಿ.ಸುಧಾಕರ, ತಾಲೂಕಾ ಆರೋಗ್ಯಾಧಿಕಾರಿ. ಡಾ ಶಿವಾನಂದ ಮಾಸ್ತಿಹೊಳಿ, ಶರಣಪ್ಪ ಎಸ್ ಗಡೆದ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Leave a Reply