This is the title of the web page
This is the title of the web page

Please assign a menu to the primary menu location under menu

State

ಕುರುಬರಿಗೆ ಎಸ್.ಟಿ.ಮೀಸಲಾತಿ ನೀಡುವಂತೆ ಬೆಂಗಳೂರು ಚಲೋ.


ಕುಷ್ಟಗಿ:-ಕುರುಬ ಸಮಾಜದ ಎಸ್.ಟಿ ಮೀಸಲಾತಿಗಾಗಿ ಇದೇ ನಂವ್ಹಬರ್ ೨೧ ರಂದು ಸೋಮವಾರ ಬೆಂಗಳೂರಿನ ಪ್ರೀಡಂಪಾರ್ಕ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಕುಷ್ಟಗಿ ತಾಲೂಕಿನ ಕುರುಬ ಸಮಾಜದ ಬಂಧುಗಳು ಧರಣಿ ಅತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಎಂದು ಕುಷ್ಟಗಿ ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಹೊಳಿಯಪ್ಪ ಕುರಿ ಹೇಳಿದರು.

ಕುಷ್ಟಗಿ ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನು ನೆಡೆಸಿ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಕುರುಬ ಸಮಾಜವು ಎಸ್.ಟಿ. ಮೀಸಲಾತಿಗಾಗಿ ಸಾಕಷ್ಟು ಬಾರಿ ಹೋರಾಟವನ್ನು ನೆಡೆಸಿದಕ್ಕೆ ರಾಜ್ಯ ಸರಕಾರವು ಕುಲಶಾಸ್ತ್ರಿಯ ಅಧ್ಯಾಯನ ಮಾಡಿ ವರದಿಯನ್ನು ರಾಜ್ಯ ಸರಕಾರಕ್ಕೆ ಕಳಿಸುವಂತೆ ಕೇಂದ್ರದ ಅಲೆಮಾರಿ ಬುಡಕಟ್ಟು ಇಲಾಖೆಗೆ ಕಳಿಸಿತ್ತು ಆ ಕುಲಶಾಸ್ತ್ರೀ ಅಧ್ಯಾಯನ ಮಾಡಿದ ವರದಿ ಮರಳಿ ರಾಜ್ಯ ಸರಕಾರಕ್ಕೆ ಬಂದಿದೆ ಆದರೆ ವರದಿಯನ್ನು ಕೇಂದ್ರ ಸರಕಾರಕ್ಕೆ ಮರಳಿ ಸಿಪಾರಸ್ಸು ಮಾಡುವಲ್ಲಿ ಮೀನಾಮೇಷ ಮಾಡುತ್ತಿದ್ದು ಮತ್ತು ರಾಜ್ಯ ಸರಕಾರ ಈ ವಿಷಯದಲ್ಲಿ ತೀರಾ ಅನ್ಯಾಯವನ್ನು ಮಾಡುತ್ತಿದ್ದು ಮಲತಾಯಿ ದೋರಣೆ ಅನುಸರಿಸುತ್ತಿದೆ ಆದ್ದರಿಂದ ಕೇಂದ್ರ ಸರಕಾರಕ್ಕೆ ವರದಿ ನೀಡುವಂತೆ ರಾಜ್ಯ ಸರಕಾರದ ವಿರುದ್ಧ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ನಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಹಾಲುಮತ ಸಮಾಜದ ಪ್ರಧಾನ ಕಾರ್ಯದರ್ಶಿ ಹುಲಗಪ್ಪ ಚೂರಿ ಹಾಗೂ ಹಾಲುಮತ ಸಮಾಜದ ಮುಖಂಡ ಮಂಜುನಾಥ ನಾಲಗಾರ ಮಾತನಾಡಿ ರಾಜ್ಯ ಸರಕಾರ ಕುರುಬರಿಗೆ ಕನಕದಾಸ ಜಯಂತಿ ದಿನದಂದು ಸಿಹಿ ಸುದ್ಧಿ ನೀಡುತ್ತೇವೆ ಎಂದು ಹೇಳಿತ್ತು ಆದರೆ ಈಗ ರಾಜ್ಯ ಸರಕಾರ ಕುರುಬ ಸಮಾಜಕ್ಕೆ ಎಸ್.ಟಿ ಮೀಸಲಾತಿ ಬಗ್ಗೆ ಏನು ಹೇಳುತ್ತಿಲ್ಲ ರಾಜ್ಯ ಸರಕಾರವು ಕುರುಬ ಸಮಾಜದ ವಿಚಾರದಲ್ಲಿ ಬಹಳ ಅನ್ಯಾಯ ಮಾಡುತ್ತಿದೆ ಆದ್ದರಿಂದ ಇದೇ ನಂವ್ಹಬರ್ ೨೧ ರಂದು ಬೆಂಗಳೂರಿನ ಪ್ರೀಡಂಪಾರ್ಕ ಮುಂದೆ ನಮ್ಮ ಸಮಾಜದ ಶ್ರೀ ಶ್ರೀ ಜಗದ್ಗುರು ನಿರಂಜಾನಂದನಪುರಿ ಮಾಹಾ ಸ್ವಾಮಿಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ನಮ್ಮ ಕುಷ್ಟಗಿ ತಾಲೂಕಿನ ಕುರುಬ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಧರಣಿ ಸತ್ಯಾಗ್ರಹವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಲುಮತ ಸಮಾಜದ ಉಪಾಧ್ಯಕ್ಷ ಗುಂಡಪ್ಪ ಎಮ್.ಚಳಗೇರಿ, ಹಾಲುಮತ ಸಮಾಜದ ಮುಖಂಡರಾದ ಮುದಕಪ್ಪ ಆಚಾರಿ, ಶರಣಪ್ಪ ಚೂರಿ, ವಿಠಪ್ಪ ಚಳಗೇರಿ, ಚನ್ನಪ್ಪ ನಾಲಗಾರ, ಜಿಲ್ಲಾ ಹಾಲುಮತ ಸಮಾಜದ ಮುಖಂಡ ಕೊಳ್ಳಪ್ಪ ಬೂದ್, ನಗರ ಘಟಕದ ಅಧ್ಯಕ್ಷ ತೊಂಡೆಪ್ಪ ವಾಯ್.ಚೂರಿ, ಮಲ್ಲು ನಾಲಗಾರ, ರಮೇಶ ಮಮದಾಪೂರ, ರಾಜಪ್ಪ ಸಂಗಂಟಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply