ಮೂಡಲಗಿ: ತಾಲೂಕಿನ ಯಾದವಾಡ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕೊಪ್ಪದಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಅತ್ತ್ಯುತ್ತಮ ಸಾಧನೆಯನ್ನು ಪ್ರದರ್ಶಿಸಿದ್ದಾರೆ ಶಾಲೆಯ ಪ್ರಧಾನ ಗುರುಗಳಾದ ವ್ಹಿ.ಆರ.ಬರಗಿ ತಿಳಿಸಿದ್ದಾರೆ.
ಬಾಲಕಿಯರ ವಿಭಾಗಲ್ಲಿ ಜ್ಯೋತಿ ಹುಣಸಿಕಟ್ಟಿ ೮೦ಮೀ ಹಡÀðಲ್ಸ್, ೨೦೦ಮೀ ಓಟ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಆಯ್ಕೆಯಾಗಿರುತ್ತಾಳೆ.ಸುಜಾತಾ ಬಂಡ್ಡಿವಡ್ಡರ ಎತ್ತರ ಜಿಗಿತ, ೬೦೦ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತಾಳೆ.ಬೃಂದಾ ಮುದ್ದಾಪೂರ್ ೬೦೦ಮೀ ನಲ್ಲಿ ಪ್ರಥಮ ಸ್ಥಾನ, ಅಮೃತಾ ಕರಿತಮ್ಮ ೧೦೦ಮೀ ದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ.
ಬಾಲಕರ ವಿಭಾಗದಲ್ಲಿ ತೌಸೀಫ್ ತಹಸೀಲ್ದಾರ್ ಉದ್ದ ಜಿಗಿತದಲ್ಲಿ ಪ್ರಥಮ, ೮೦ಮೀ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ.ಆಯಾನ್ ರಕೀಪದಾರ್ ೬೦೦ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತಾನೆ. ಗುಂಪು ಆಟಗಳಲ್ಲಿ ಬಾಲಕಿಯರ ಥ್ರೋ ಬಾಲ್, ಖೋ -ಖೋ ದಲ್ಲಿ ಪ್ರಥಮ ಸ್ಥಾನ ಹಾಗೂ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಬಾಲಕರ ಗುಂಪು ಆಟದಲ್ಲಿ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.ಕ್ರೀಡಾ ಕೂಟದಲ್ಲಿ ಭಾಗವಹಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಬಸಪ್ಪ ಬಾಗಿ ಹಾಗೂ ಪದಾಧಿಕಾರಿಗಳು, ಶಾಲೆಯ ಪ್ರಧಾನ ಗುರಗಳಾದ ವ್ಹಿ.ಆರ್. ಬರಗಿ ಹಾಗೂ ಎಲ್ಲ ಶಿಕ್ಷಕ ಸಿಬ್ಬಂದಿ ವರ್ಗದ ಹರ್ಷ ವ್ಯಕ್ತಪಡಿಸಿ ಅಭಿನಂಧಿಸಿದಾರೆ.
Gadi Kannadiga > Local News > ಕ್ರೀಡಾಕೂಟದಲ್ಲಿ ಕೊಪ್ಪದಟ್ಟಿ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಅತ್ತ್ಯುತ್ತಮ ಸಾಧನೆ
ಕ್ರೀಡಾಕೂಟದಲ್ಲಿ ಕೊಪ್ಪದಟ್ಟಿ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಅತ್ತ್ಯುತ್ತಮ ಸಾಧನೆ
Suresh08/08/2023
posted on
