ಹುಲಿಗಿ : ಸಮೀಪದ ಬೇವಿನಹಳ್ಳಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಸಂಭ್ರಮವು ಮೂರು ದಿನಗಳ ಕಾರ್ಯಕ್ರಮಗಳು ಜರುಗಲಿವೆ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕನಕಗುರು ಪೀಠದ ಕಲಬುರಗಿ ವಿಭಾಗದ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳು ತಿಂಥಣಿ ಬ್ರಿಜ್ , ಕೊಪ್ಪಳದ ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು ಮುಂಡರಗಿ, ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೆಬ್ಬಾಳ ಮಠ, ಶ್ರೀ ಶಾಂತವೀರ ಮಹಾಸ್ವಾಮಿಗಳು ಬಳಗಾನೂರು, ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ನಗರಗಡ್ಡಿ ಮಠ, ಶ್ರೀಜಡೇಶ್ವರ ಮಠದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಇನ್ನಿತರ ಹರ ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 22-03-2023 ಬುಧವಾರ ದಂದು ಬೆಳಿಗ್ಗೆ 7:00 1ಗಂಟೆ ವರೆಗೂ ಬೇವಿನಹಳ್ಳಿ ಹಾಗೂ ವಿವಿಧ ಗ್ರಾಮಸ್ಥರು ದೀರ್ಘ ದಂಡ ನಮಸ್ಕಾರ, ಭಕ್ತಿಯ ಹರಿಕೆ ಸಲ್ಲಿಸುವ ಕಾರ್ಯಕ್ರಮ ಇರುತ್ತದೆ. ಸಾಯಂಕಾಲ 5:30ಗೆ ಶ್ರೀಮಾರುತೇಶ್ವರ ಉಚ್ಚಾಯ ಉತ್ಸವ ಮತ್ತು ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.
ದಿನಾಂಕ 23-03-2023 ಗುರುವಾರ ದಂದು ಬೆಳಗ್ಗೆ 10:30 ಕ್ಕೆ ಗಂಟೆಗೆ ಸರ್ವ ಧರ್ಮದ ಸಾಮೂಹಿಕ ವಿವಾಹ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ, ಸಾಯಂಕಾಲ 5:30ಗೆ ಶ್ರೀ ಮಾರುತೇಶ್ವರ ಮಹಾರಥೋತ್ಸವ, 6:30 ನೀರುಗೊಂಡ ಆಯುವುದು ಮತ್ತು ಗಂಗಾ ಪೂಜೆ, ನಂತರ ಧಾರ್ಮಿಕ ಸಭೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿವೆ.
ದಿನಾಂಕ 24-03-2023 ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಓಕುಳಿ ಕಾರ್ಯಕ್ರಮ, ಸಾಯಂಕಾಲ 5: 00 ಗಂಟೆಗೆ ಶ್ರೀ ಮಾರುತೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ, ರಾತ್ರಿ 10 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ, ರಾತ್ರಿ 10:30ಕ್ಕೆ ಗಂಟೆಗೆ ಗ್ರಾಮದ ಸ್ಥಳೀಯ ಕಲಾವಿದರಿಂದ ಸೋಲಿಲ್ದ ಸಿಂಧೂರ ಲಕ್ಷ್ಮಣ ಎಂಬ ಸಾಮಾಜಿಕ ನಾಟಕ ಜರಗುವುದು.
ಈ ಕಾರ್ಯಕ್ರಮವನ್ನು ಶಾಸಕ ಕೆ ರಾಘವೇಂದ್ರ ಹಿಟ್ನಾಳ್ . ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ರಾಜಶೇಖರ್ ಹಿಟ್ನಾಳ್, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್ ವಿ ಗುಮಾಸ್ತೆ , ಪಿ. ನಾರಾಯಣ ಸೇರಿದಂತೆ ಜಿಲ್ಲೆಯ ವಿವಿಧ ಸಮಾಜದ ರಾಜಕೀಯ ಮುಖಂಡರುಗಳು ವಿವಿಧ ಗ್ರಾಮದ ಎಲ್ಲ ಗಣ್ಯಮಾನ್ಯರು, ವಿವಿಧ ಕ್ಷೇತ್ರದ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಹಾಲುಮತ ಮಹಾಸಭಾ ತಾಲೂಕ ಅಧ್ಯಕ್ಷ ಮುದ್ದಪ್ಪ ಬೇವಿನಹಳ್ಳಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ