This is the title of the web page
This is the title of the web page

Please assign a menu to the primary menu location under menu

Local News

ಭಗತ್ ಸಿಂಗ್ ಸರ್ಕಲ್ ಉದ್ಘಾಟಿಸಿದ ಕಾಂಗ್ರೇಸ್ ಮುಖಂಡ ಸೌರಭ ಚೋಪ್ರಾ


ಯರಗಟ್ಟಿ: ಸಮೀಪದ ರೈನಾಪೂರ ಗ್ರಾಮದ ಜನತಾ ಪ್ಲಾಟ್‌ದಲ್ಲಿ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರ‍್ಯ ಹೋರಾಟಗಾರ ಭಗತ್ ಸಿಂಗ್ ಅವರ ೧೧೫ ನೇ ಜನ್ಮದಿನದ ಅಂಗವಾಗಿ ದೇಶಪ್ರೇಮಿ ಭಗತ ಸಿಂಗ್ ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಕಾಂಗ್ರೇಸ್ ಮುಖಂಡ ಸೌರಭ ಚೋಪ್ರಾ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ೧೧೫ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತಿದೆ.
ಸೆಪ್ಟಂಬರ್ ೨೭, ೧೯೦೭ರಂದು ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಭಗತ್ ಸಿಂಗ್ ರವರ ಜನನವಾಯಿತು. ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವ ಜನತೆಗೆ ಇಂದಿಗೂ ಕೂಡ ಪ್ರೇರಣೆಯಾಗಿದ್ದಾರೆ. ಇವರ ತಾಯಿ ವಿದ್ಯಾವತಿ, ತಂದೆ ಕಿಶನ್ ಸಿಂಗ್ ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು.
ಭಗತ್ ಸಿಂಗ್ ಜಯಂತಿ ಹಿನ್ನೆಲೆಯಲ್ಲಿ ಧೀಮಂತ ನಾಯಕನನ್ನು ನೆನೆದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಭಗತ್ ಸಿಂಗ್ ಅವರ ಹೆಸರು ಶೌರ್ಯ ಮತ್ತು ತ್ಯಾಗದ ಪ್ರತೀಕ. ಅವರ ಧೈರ್ಯ ಇಂದಿಗೂ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಯುವಜನತೆ ಮನಸ್ಸಿನಲ್ಲಿ ಇಂದಿಗೂ ಅವರೊಬ್ಬ ಧೀಮಂತ ನಾಯಕ. ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ನಮಸ್ಕರಿಸುತ್ತೇನೆ ಎಂದರು.
ನಮ್ಮ ತಂದೆಯಹಾಗೆ ಸೇವೆ ಮಾಡುವ ಆಸೆ ಇದೆ ಅದಕ್ಕೆ ಯುವಕರ ಸಹಾಯ ಸಹಕಾರ ಮುಖ್ಯ ಸವದತ್ತಿ ಮತ ಕ್ಷೇತ್ರ ಸಮಗ್ರ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಡಿ ಎಂದು ಯುವ ಜನತೆಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಮಲ್ಲಪ್ಪ ಮಾಗನೂರ, ಅಶೋಕ ಕಾಮಣ್ಣವರ, ಎಸ್. ಆರ್. ಕಳ್ಳಿಗುದ್ದಿ, ನಾಗಪ್ಪ ಮೆಟಗುಡ್ಡ, ಈರಣ್ಣಾ ರೈನಾಪೂರ, ಕೃಷ್ಣಪ್ಪ ಬೆನಕಟ್ಟಿ, ಹನಮಂತ ಮೆಟಗುಡ್ಡ, ಚಂದ್ರಪ್ಪ ರವಿ, ವಿಠ್ಠಲ ತಳವಾರ, ಶಂಕರೆಪ್ಪ ಆಚಮಟ್ಟಿ, ರಾಜು ನದಾಫ, ಚಂದ್ರಪ್ಪ ತೋರಣಗಟ್ಟಿ, ಗ್ರಾ. ಪಂ. ಸದಸ್ಯ ನಂದಗೋಪಾಲ ಕಡೇಮನಿ, ವೆಂಕಣ್ಣಾ ಹುರಕ್ಕನ್ನವರ, ಸೋಮ ರೈನಾಪೂರ ಸೇರಿದಂತೆ ಭಗತ್ ಸಿಂಗ ಅಭಿಮಾನಿ ಬಳಗದ ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


Gadi Kannadiga

Leave a Reply