ಬೆಳಗಾವಿ: ಭಗವಾನ ಮಹಾವೀರ ಜನ್ಮಕಲ್ಯಾಣ ಮಹೋತ್ಸವವನ್ನು ಏ.14ರಂದು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು ಮಹೋತ್ಸವದ ಅಂಗವಾಗಿ ರಕ್ತಧಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಭಗವಾನ ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಮಧ್ಯವರ್ತಿ ಉತ್ಸವ ಸಂಘದ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ್ ಹೇಳಿದರು.
ಮಂಗಳವಾರ ಭರತೇಶ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುದ್ದೀಗೋಷ್ಟಿಯಲ್ಲಿ ಅವರು ಮಾತನಾಡಿದರು ಏ. 14 ರಂದು ಭಗವಾನ್ ಮಹಾವೀರರ 2621 ಜನ್ಮ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು ಬೆಳಗಾವಿಯಲ್ಲಿ 23 ನೆಯ ಉತ್ಸವ ಇದಾಗಿದೆ. ವಿಶೇಷವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಮೂರು ದಿನಗಳ ರಕ್ತದಾನ ಶಿಬಿರ, ಮಹಿಳೆ ಮಕ್ಕಳು ಹಿರಿಯರಿಗೆ ಸಾಂಸ್ಕೃತಿಕ ಮತ್ತು ಸ್ಪರ್ಧಾತ್ಮಕ ಚಟುವಟಿಕೆಗಳು ಮುಂತಾದ ವಿಶೇಷತೆ ಈ ಜಯಂತಿಗಾಗಿ ನಡೆಯುತ್ತಿವೆ.
ಉದಯಪುರದಿಂದ ಬಂದಂತ ಹರ್ಷಕವಿ ಸಮೂಹದಿಂದ ಆದ್ಯಾತ್ಮಿಕ ಹರ್ಷಕಾವ್ಯ ಸಮ್ಮೇಳನವು ಕೂಡಾ ವಿಶೇಷ,,14ನೆಯ ತಾರೀಖಿನ ಮಹಾವೀರ ಜನ್ಮೊತ್ಸವದ ಶೋಭಾಯಾತ್ರೆ ನಗರದ ವಿವಿಧ ಮುಖ್ಯ ರಸ್ತೆ, ಪ್ರದೇಶಗಳಲ್ಲಿ ಸಂಚಲಿಸಿ ಕೊನೆಗೆ ಗೋವಾವೆಸ್ ಅಲ್ಲಿ ಇರುವ ಮಹಾವೀರ ಭವನದಲ್ಲಿ ಕೊನೆಗೊಳ್ಳುತ್ತದೆ.
ಈ ವರ್ಷ ವಿಶೇಷವಾಗಿ 100 ಬುಲ್ಲೆಟ್ ಗಾಡಿಗಳಲ್ಲಿ ಯುವಕ ಯುವತಿಯರು ಸಂಚರಿಸುವ ಮೂಲಕ ಅಹಿಂಸಾ ಜಾಗೃತಿ ಮೂಡಿಸುವರು, ಅದೇ ರೀತಿ ಸುಮಾರು 40 ಗಾಡಿಗಳಲ್ಲಿ ಜೈನ ಸಮುದಾಯದ ಪರಂಪರೆಯ ರೂಪಕಗಳ ಪ್ರದರ್ಶನವು ನಡೆಯುತ್ತೆ,, ಈ ಜಯಂತಿ ಉತ್ಸವದ ಶೋಭಾಯಾತ್ರೆಗೆ ಜೈನ್ ಸಮುದಾಯದೊಂದಿಗೆ ಜಿಲ್ಲಾಡಾಳಿತ ಮತ್ತು ಮಹಾನಗರ ಪಾಲಿಕೆ ಸಹಕಾರ ಸಹಭಾಗಿತ್ವ ನೀಡಿದೆ. ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರು, ಪೊಲೀಸ್ ಆಯೋಕ್ತರು, ಶಾಸಕ, ಸಂಸದರು, ಸಮಾಜದ ಗಣ್ಯರು, ಜೈನ್ ಸಮೂಹದ ಜನಪ್ರತಿನಿಧಿಗಳು, ಎಲ್ಲ ಗಣ್ಯರು ಭಾಗಿಯಾಗುವರು.
ಶೋಭಾಯಾತ್ರೆ ಮುಗಿದ ಕೂಡಲೇ 25 ಸಾವಿರ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು ಎಲ್ಲರರು ಬಂದು ಈ ವಿಜೃಂಭಣೆಯ ಜಯಂತ್ಯೋತ್ಸವ ವನ್ನು ಅದ್ದೂರಿಯಾಗಿ ನಡೆಸಿ ಕೊಡಬೇಕು ಎಂದು ತಿಳಿಸಿದರು.