ಮೂಡಲಗಿ: ಜೀವನದಲ್ಲಿ ಅಸಾಧ್ಯವಾದದನ್ನು ಸಾಧ್ಯವಾಗಿಸುವ ಪ್ರಯತ್ನವೇ ಭಗೀರಥ ಪ್ರಯತ್ನ ಎಂದು ತುಕ್ಕಾನಟ್ಟಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವೀಮಲಾಕ್ಷಿ ತೋರಗಲ್ಲ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಂದು ಜರುಗಿದ ಶ್ರೀ ಮಹರ್ಷಿ ಭಗೀರಥರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಲೋಕ ಕಲ್ಯಾಣಗೋಸ್ಕರ ಹಿಂದು ನದಿ ಗಂಗೆಯನ್ನು ಧರೆಗಿಳಿಸಿದ ಭಗೀರಥನ ಪ್ರಯತ್ನ ಹಿಂದೆ ವಾಸ್ತವಿಕ ಜಗತ್ತಿಗೆ ಸಂದೇಶವಿದ್ದೆ, ಜೀವನದಲ್ಲಿ ಪ್ರತಿಯೋಬ್ಬರು ಕ್ರೀಯಾಶೀಲರಾಗಿ ಅಸಾಧ್ಯ ಎಂಬದನ್ನು ತೆಗೆದು ಸಾಧ್ಯವಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಹಾನ್ ತಪಸ್ವಿ ಭಗೀರಥರ ಸಂದೇಶವನ್ನು ಅಳವಡಿಸಿಕೊಳ್ಳ ಬೇಕೆಂದರು.
ತನ್ನ ಘೋರ ತಪಸ್ಸಿನಿಂದ ಕುಗ್ಗದ ಛಲ ದೃಢಸಂಕಲ್ಪದಿಂದ ಕಠಿಣ ಕಾರ್ಯ ಪೂರೈಸಿ ಪೂರ್ವಜರಿಗೆ ಸ್ವರ್ಗದೋರಕಿಸಿಕೊಟ್ಟ ಭಗೀರಥ ಮಹರ್ಷಿ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಶಾಲೆಯ ಪ್ರಧಾನಗುರುಗಳಾದ ಎ.ವ್ಹಿ ಗಿರೆಣ್ಣವರ ಸಮಾರಂಭದ ಆಧ್ಯಕ್ಷತೆ ವಹಿಸಿ ಶ್ರೀ ಮಹರ್ಷಿ ಭಗೀರಥರ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆನಂದ ಮಾಳವಾದೆ, ಕಿರಣ ಭಜಂತ್ರಿ, ಮಹಾದೇವ ಗೋಮಾಡಿ, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಷಮಾ ಚಿಗರಿ, ಶೀಲಾ ಕುಲಕರ್ಣಿ, ಹೊಳೇಪ್ಪ ಗದಾಡಿ, ರೇಖಾ ಗದಾಡಿ, ಶೀವಲಿಲಾ ಹನಮನವರ ಉಪಸ್ಥಿತರಿದ್ದರು.
Gadi Kannadiga > Local News > ಅಸಾಧ್ಯವಾದದ್ಧನ್ನೆ ಸಾಧ್ಯವಾಗಿಸುವುದೆ ಭಗೀರಥ ಪ್ರಯತ್ನ-ತೋರಗಲ್ಲ
ಅಸಾಧ್ಯವಾದದ್ಧನ್ನೆ ಸಾಧ್ಯವಾಗಿಸುವುದೆ ಭಗೀರಥ ಪ್ರಯತ್ನ-ತೋರಗಲ್ಲ
Suresh27/04/2023
posted on
