This is the title of the web page
This is the title of the web page

Please assign a menu to the primary menu location under menu

State

ಭಾಗ್ಯನಗರ: ಮರುಬಳಕೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಿರಿ


ಕೊಪ್ಪಳ ಮೇ ೧೬ : ಭಾಗ್ಯನಗರ ಪಟ್ಟಣ ಪಂಚಾಯತಿಯಲ್ಲಿ ಮರುಬಳಕೆ ವಸ್ತುಗಳ ಸಂಗ್ರಹಣ ಕೇಂದ್ರವನ್ನು ತೆರೆಯಲಾಗಿದ್ದು, ಮರುಬಳಕೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಆರ್.ಆರ್.ಆರ್ ಕೇಂದ್ರಕ್ಕೆ ನೀಡುವಂತೆ ಪ.ಪಂ ಮುಖಾಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ಭಾಗ್ಯನಗರ ಪಟ್ಟಣ ಪಂಚಾಯತಿಯಲ್ಲಿ ಎಸ್.ಬಿ.ಎಂ ಯೋಜನೆಯಡಿಯಲ್ಲಿ “ಮೇರಿ ಲೈಫ್ ಮೇರಿ ಸ್ವಚ್ಛ ಶೆಹರ್” ಅಂದರೆ ನನ್ನ ಜೀವನ ನಮ್ಮ ಸ್ವಚ್ಛ ಸುಂದರ ನಗರ ಕಾರ್ಯಕ್ರಮದಡಿ ಪಟ್ಟಣದ ಸಾರ್ವಜನಿಕರು ತಮ್ಮ ಮನೆ ಮತ್ತು ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಅಂದರೆ ಆರ್.ಆರ್.ಆರ್ (ರೀಡಸ್ ರೀಯೂಸ್ & ರೀಸೈಕಲ್) ಆಗುವಂತ ವಸ್ತುಗಳಾದ ಬಳಕೆಯಾದ ಪ್ಲಾಸ್ಟಿಕ್, ಹಳೆಬುಕ್ಸ್, ಎಲೆಕ್ಟ್ರಿಕ್ ಸಾಮಾನುಗಳು, ಹಳೆಬಟ್ಟೆ, ಗೊಂಬೆಗಳು, ನ್ಯೂಸ್ ಪೇಪರ್ ಮತ್ತು ಉಪಯೋಗಕ್ಕೆ ಬಾರದ ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಇವುಗಳ ಕಲೆಕ್ಷನ್ (ಸಂಗ್ರಹ) ಕೇಂದ್ರವನ್ನು ಭಾಗ್ಯನಗರ ಪಟ್ಟಣ ಪಂಚಾಯತಿಯಲ್ಲಿ ತೆರೆಯಲಾಗಿದೆ.
ಎಲ್ಲಾ ಸಾರ್ವಜನಿಕರು ಮರುಬಳಕೆ ವಸ್ತುಗಳನ್ನು ಪ.ಪಂ ಕಛೇರಿಯಲ್ಲಿನ ಆರ್.ಆರ್.ಆರ್ ಸಂಗ್ರಹಣ ಕೇಂದ್ರಕ್ಕೆ ತಂದು ಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸುವಹುದಾಗಿದೆ ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.


Leave a Reply