This is the title of the web page
This is the title of the web page

Please assign a menu to the primary menu location under menu

Local News

ವಿದ್ಯಾರ್ಥಿಗಳು ಹೊರ ಜಗತ್ತಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು : ಭಾಗ್ಯಶ್ರೀ ಹುಗ್ಗಿ


ಬೆಳಗಾವಿ:- ವಿದ್ಯಾರ್ಥಿಗಳು ಒಂದು ನಿರ್ಧಿಷ್ಟ ವಲಯಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ, ಪ್ರಸ್ತುತ ಸ್ಪರ್ಧಾತ್ಮಕ ಹೊರಜಗತ್ತು ಗುರುತಿಸಿ ವ್ಯಕ್ತಿತ್ವ ನಿರ್ಮಿಸಿಕೊಳ್ಳುವ ಗುಣ ಬೆಳೆಸಿಕೊಳ್ಳುವುದು ಅಗತ್ಯವಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಸೂಚಿಸಿದ್ದಾರೆ.
ಬುಧುವಾರ ದಿ. ೦೩/೦೮/೨೨ ರಂದು ಜರುಗಿದ ನಗರದ ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಆರಂಭೋತ್ಸವ ‘ಮಾಸ್ಕೆ÷್ವರೇಡ್ ಬಾಲ್’ ಉದ್ಘಾಟಿಸಿ ಮಾತನಾಡಿದರು. ಇಂದು ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಬದುಕು ರೂಪಿಸಿಕೊಳ್ಳುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಗುರಿ ಸಾಧನೆ ಸೂಕ್ತ ಮಾರ್ಗದರ್ಶದ ಅಗತ್ಯವೂ ಇದ್ದು, ಅದನ್ನು ಶಿಕ್ಷಣದ ಮೂಲಕ ಪಡೆದುಕೊಂಡು ನಿರಂತರ ಕ್ರಿಯಾಶೀಲತೆಯೊಂದಿಗೆ ಪ್ರಯತ್ನವಾದಿಗಳಾಗಿರಬೇಕು. ಗುರಿ ಸಾಧನೆಯ ನಂತರ ಕೇವಲ ವೈಯಕ್ತಿಕ ಅಭಿವೃದ್ಧಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ, ಅಸಹಾಯಕ, ದುರ್ಬಲ ವರ್ಗದ ಹಿತಾಶಕ್ತಿಗೆ ಶ್ರಮಿಸುವುದರ ಮೂಲಕ ಜೀವನದ ಸಾರ್ಥಕತೆ ಪಡೆದುಕೊಳ್ಳುವ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸನ್‌ಚ್ಯುರ್ ಸಂಸ್ಥೆ ಎಚ್‌ಆರ್ ಆಗಿರುವ ಕ್ಯಾಂಡಿಡಾ ಹಲಗೆಕರ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಸಾಂಸ್ಕೃತಿಕ ವೈವಿದ್ಯತೆಯ ಅಭಿರುಚಿ ಹೊಂದಿರಬೇಕು ಎಂದು ತಿಳಿಸಿದರು.
ಜೈನ್ ಕಾಲೇಜಿನ ಪ್ರಾಚಾರ್ಯರಾದ ರೋಹಿಣಿ ಕೆ.ಬಿ. ಉಪಸ್ಥಿತರಿದ್ದರು. ಆರ್ಯಾನ್ ಜಿಲಾನಿ ಮತ್ತು ಆಕಾಂಕ್ಷಾ ಭಟ್ಟ ಸ್ವಾಗತಿಸಿದರು. ಅನನ್ಯ ನಾಯಿಕ ಪರಿಚಯಿಸಿದರು. ಸ್ನೇಹಾ ಬೋಗಾರ ಮತ್ತು ಪ್ರಜ್ವಲ ಕೊಳಕಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


Gadi Kannadiga

Leave a Reply