ಕೊಪ್ಪಳ:- ಭಾರತದಲ್ಲಿ ಕೋವಿಡ್ ಲಸಿಕೆ ಒಂದು ವರ್ಷ: ವಿಶ್ವದ ಅತಿ ದೊಡ್ಡ
ಮತ್ತು ವೇಗವಾದ ಲಸಿಕೆ ಅಭಿಯಾನ- ಚರ್ಚೆಗೆ ಪೂರಕ ಬಿಂದುಗಳು ನಿಖರವಾಗಿ ಒಂದು ವರ್ಷದ ಹಿಂದೆ, ಭಾರತವು ಲಸಿಕೆ ಹಾಕುವ ಪ್ರಯಾಸಕರ ಅಭಿಯಾನವನ್ನು
ಪ್ರಾರಂಭಿಸಿತು.
ಭೀಕರ ಕೋವಿಡ್ ಸಾಂಕ್ರಾಮಿಕದ ಮಧ್ಯೆ 135 ಕೋಟಿ ಜನರು ಸಿಲುಕುವ ಅಪಾಯವಿತ್ತು. ಆದರೆ,
ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಅಸಾಧ್ಯ ಅಂದುಕೊಂಡಿದ್ದ ಕೆಲಸ
ಸಾಧ್ಯವಾಯಿತು. ಇಡೀ ಜಗತ್ತು ನಮ್ಮನ್ನು ಮೆಚ್ಚಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಹೊಸ ಅಧ್ಯಾಯವನ್ನು ಬರೆದಿದೆ
ನಮ್ಮ ವಿಜ್ಞಾನಿಗಳ ಏಕೀಕೃತ ಪ್ರಯತ್ನಗಳೊಂದಿಗೆ ವ್ಯಾಕ್ಸಿನೇಷನ್ ಕ್ಷೇತ್ರದಲ್ಲಿ ವಿನೂತನ ಅಧ್ಯಾಯ
ಸಾಧ್ಯವಾಯಿತು. ಉದ್ಯಮಿಗಳು, ಮುಂಚೂಣಿ ಕೆಲಸಗಾರರು ಮತ್ತು ಆರೋಗ್ಯ ಕಾರ್ಯಕರ್ತರು ಇದಕ್ಕೆ
ಕೈಜೋಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅತಿ ದೊಡ್ಡ ಮತ್ತು ವೇಗದ
ವ್ಯಾಕ್ಸಿನೇಷನ್ ಅಭಿಯಾನಕ್ಕೆ ಕಾರಣಕರ್ತರು ಇದಕ್ಕಾಗಿ ಅವರಿಗೆ ಮತ್ತು ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟು ಇದುವರೆಗೂ 157 ಕೋಟಿ ಲಸಿಕೆ ನೀಡಿದ್ದಾರೆ.
15ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಾರಂಭವಾದ ದಿನದಿಂದ
ಇಲ್ಲಿಯವರೆಗೆ ಒಟ್ಟು 3.31 ಕೋಟಿ ಮಕ್ಕಳಿಗೆ ನೀಡಲಾಗಿದೆ.ಎಂದು ಮಾಜಿ ಶಾಸಕ ಹಾಗೂ ಭಾಜಪಾ ಜಿಲ್ಲಾಧ್ಯಕ್ಷ ದೊಡ್ಡನಗೌಡ ಎಚ್ ಪಾಟೀಲ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ